Select Your Language

Notifications

webdunia
webdunia
webdunia
webdunia

ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣಕ್ಕೆ ರಾಜ್ಯಪಾಲರು ನಿರಾಕರಣೆ ಮಾಡಲು ಇದೇ ಕಾರಣ

Thawar Chand Gehlot
ಬೆಂಗಳೂರು: ಜಂಟಿ ಅಧಿವೇಶನ ಆರಂಭಕ್ಕೂ ಮುನ್ನಾ ರಾಜ್ಯಪಾಲ ಥಾವರ್‌ ಸಿಂಗ್‌ ಗೆಹ್ಲೋಟ್‌ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಓದಲು ನಿರಾಕರಿಸಿದ ಹಿನ್ನೆಲೆ ರಾಜ್ಯಪಾಲರು Vs ಸರ್ಕಾರದ ಸಂಘರ್ಷ ಆರಂಭವಾಗಿದೆ.

ದಕ್ಷಿಣ ರಾಜ್ಯಗಳ ಮೇಲೆ ತಾರತಮ್ಯ ವಿಚಾರವಾಗಿ ರಾಜ್ಯ ಸರ್ಕಾರ ಐದಾರು ಬಾರಿ ಕೇಂದ್ರ ಸರ್ಕಾರದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಅಂಶವನ್ನು ಭಾಷಣದಲ್ಲಿ ಉಲ್ಲೇಖಿಸಲಾಗಿದೆ. ಭಾಷಣದಲ್ಲಿ ವಿಚಾರ ಪ್ರಸ್ತಾಪವಾದ ಬೆನ್ನಲ್ಲೇ ರಾಜ್ಯಪಾಲರು ಭಾಷಣ ಓದದೇ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಜ್ಯಪಾಲರು ತಮ್ಮ ನಿರ್ಧಾರ ಪ್ರಕಟಿಸುತ್ತಿದ್ದಂತೆ ಮಧ್ಯಾಹ್ನ 1 ಗಂಟೆಗೆ ರಾಜಭವನದಿಂದ ಕಾನೂನು ಸಚಿವ ಹೆಚ್.ಕೆ.ಪಾಟೀಲ್‌ಗೆ ಕರೆ ಬಂದಿದೆ. ಭಾಷಣವನ್ನು ಬದಲಿಸದೇ ಇದ್ದರೆ ರಾಜ್ಯಪಾಲರು ಭಾಷಣಕ್ಕೆ ಬರುವುದಿಲ್ಲ ಎಂದು ಸರ್ಕಾರಕ್ಕೆ  ತಿಳಿಸಲಾಗಿದೆ.

ಈಗ ರಾಜ್ಯಪಾಲರ ಮನವೊಲಿಕೆಗೆ ರಾಜ್ಯ ಸರ್ಕಾರ ಕಸರತ್ತು ಮಾಡಲು ಆರಂಭಿಸಿದೆ. ರಾಜಭವನಕ್ಕೆ ಸ್ಪೀಕರ್ ಯುಟಿ ಖಾದರ್‌, ಸಭಾಪತಿ ಬಸವರಾಜ ಹೊರಟ್ಟಿ ಆಗಮಿಸಿ ಮನವೊಲಿಕೆಗೆ ಯತ್ನಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹೈದರಾಬಾದ್‌ನಲ್ಲಿ 100 ಬೀದಿ ನಾಯಿಗಳಿಗೆ ವಿಷ ಹಾಕಿ ಹತ್ಯೆ, ಪ್ರಕರಣ ದಾಖಲು