Select Your Language

Notifications

webdunia
webdunia
webdunia
webdunia

ಎನ್‌ಸಿ ಕ್ಲಾಸಿಕ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ಚೋಪ್ರಾ: ಜಾವೆಲಿನ್‌ ಹಬ್ಬದಲ್ಲಿ ಮಿಂದೆದ್ದ ಸಿಲಿಕಾನ್‌ ಸಿಟಿ ಮಂದಿ

Neeraj Chopra Classic Javelin, Chief Minister Siddaramaiah, Governor Thawar Chand Gehlot

Sampriya

ಬೆಂಗಳೂರು , ಭಾನುವಾರ, 6 ಜುಲೈ 2025 (10:08 IST)
Photo Credit X
ಬೆಂಗಳೂರು: ಭಾರತದಲ್ಲೇ ಮೊತ್ತ ಮೊದಲ ಬಾರಿ ನಡೆದ ಅಂತಾರಾಷ್ಟ್ರೀಯ ಜಾವೆಲಿನ್ ಟೂರ್ನಿ ಎನ್‌ಸಿ ಕ್ಲಾಸಿಕ್‌ನಲ್ಲಿ ನಿರೀಕ್ಷೆಯಂತೆ ನೀರಜ್‌ ಚೋಪ್ರಾ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. 

ಇಲ್ಲಿನ ಕಂಠೀರ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧಾವಳಿಯಲ್ಲಿ ನೀರಜ್ ಚೋಪ್ರಾ 86.18 ಮೀ.ದೂರ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕೀನ್ಯದ ಜುಲಿಯಸ್ ಯೆಗೊ (84.51 ಮೀ.) ಹಾಗೂ ಶ್ರೀಲಂಕಾದ ರುಮೇಶ್ ಪತಿರಾಜ್ ಗೆ (83.34 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದರು. ಭಾರತದ ಸಚಿನ್ ಯಾದವ್ 82.33 ಮೀಟರ್ ಗರಿಷ್ಠ ಎಸೆತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಎನ್‌ಸಿ ಕ್ಲಾಸಿಕ್‌ನ ಚೊಚ್ಚಲ ಆವೃತ್ತಿ ಗೆದ್ದ ನೀರಜ್‌ ಚೋಪ್ರಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಸನ್ಮಾನಿಸಿದ್ದಾರೆ. ಈ ಮಾಹಿತಿಯನ್ನು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿರುವ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂದು ನಡೆದ ನೀರಜ್ ಚೋಪ್ರಾ ಕ್ಲಾಸಿಕ್- 2025 ಜಾವೆಲಿನ್ ಎಸೆತ ಕ್ರೀಡಾಕೂಟದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್‌ ಅವರ ಜೊತೆಯಾಗಿ ಪಾಲ್ಗೊಂಡು, ವಿಶ್ವಶ್ರೇಷ್ಠ ಜಾವೆಲಿನ್ ಎಸೆತಗಾರರ ಕ್ರೀಡಾ ಪ್ರದರ್ಶನ ವೀಕ್ಷಿಸಿದೆ. 
 2 ಬಾರಿ ಒಲಿಂಪಿಕ್ ಪದಕ ವಿಜೇತ, ಹಾಲಿ ವಿಶ್ವಚಾಂಪಿಯನ್, ವಿಶ್ವನಂ. 1 ಜಾವಲಿನ್ ಪಟು ನೀರಜ್ ಚೋಪ್ರಾ ತಮ್ಮ ಹೆಸರಿನಲ್ಲಿ ಆಯೋಜಿಸಿದ್ದ ಈ ಅಂತಾರಾಷ್ಟ್ರೀಯ ಜಾವಲಿನ್ ಪಂದ್ಯಾಕೂಟದಲ್ಲಿ ಸ್ವತಃ ಅವರೇ ಚಾಂಪಿಯನ್ ಆಗಿ ಹೊರಹೊಮ್ಮಿದ ಕ್ಷಣಗಳಿಗೆ ನಾನು ಸಾಕ್ಷಿಯಾದದ್ದು ಹೆಚ್ಚು ಖುಷಿ ಕೊಟ್ಟಿತು. ನೀರಜ್ ಚೋಪ್ರಾ ಅವರಿಗೆ ಪದಕ ನೀಡಿ ಗೌರವಿಸಿ, ಮುಂದಿನ ಒಲಿಂಪಿಕ್‌ನಲ್ಲಿ ಮತ್ತೆ ಭಾರತದ ಕೀರ್ತಿಪತಾಕೆ ಹಾರಲೆಂದು ಸಿದ್ದರಾಮಯ್ಯ ಶುಭ ಹಾರೈಸಿದರು.

ಬೆಂಗಳೂರಿನಲ್ಲಿ ನನಗೆ ಉತ್ತಮ ಅನುಭವ ದೊರೆಯಿತು. ನಾನು ಇನ್ನಷ್ಟು ದೂರ ಜಾವೆಲಿನ್ ಎಸೆಯಲು ಬಯಸಿದ್ದೆ. ಆದರೆ ಗಾಳಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ಇದು ತುಂಬಾ ಕಠಿಣ ಸ್ಪರ್ಧಾವಳಿಯಾಗಿತ್ತು. ನಮಗೆ ಸಿಕ್ಕ ಬೆಂಬಲದಿಂದ ನನಗೆ ಖುಷಿಯಾಗಿದೆ ಎಂದು ನೀರಜ್‌ ಚೋಪ್ರಾ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಅಪರೂಪದ ದಾಖಲೆ ಮಾಡಿದ ಶುಭಮನ್ ಗಿಲ್