Select Your Language

Notifications

webdunia
webdunia
webdunia
webdunia

ಸಿಲಿಕಾನ್‌ ಸಿಟಿಯಲ್ಲಿ ಮೋದಿ ಮೇನಿಯಾ: ಪ್ರಧಾನಿಯನ್ನು ನೋಡಲು ಮಳೆಯನ್ನು ಲೆಕ್ಕಿಸದೆ ಜಮಾಯಿಸಿದ ಜನರು

Krantiveera Sangolli Rayanna, Prime Minister Narendra Modi, Governor Thawar Chand Gehlot

Sampriya

ಬೆಂಗಳೂರು , ಭಾನುವಾರ, 10 ಆಗಸ್ಟ್ 2025 (12:40 IST)
Photo Credit X
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲುನಿಲ್ದಾಣದಲ್ಲಿ  ಬೆಂಗಳೂರು - ಬೆಳಗಾವಿ ವಂದೇ ಭಾರತ್ ಸೇರಿದಂತೆ 3 ವಂದೇ ಭಾರತ್ ರೈಲುಗಳಿಗೆ ಗ್ರೀನ್‌ ಸಿಗ್ನಲ್‌ ನೀಡಿದರು.  ಬಳಿಕ ರಾಗಿಗುಡ್ಡ ಮೆಟ್ರೋ ನಿಲ್ದಾಣದತ್ತ ಸಂಚರಿಸಿದರು. 

ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ, ಸಚಿವ ದಿನೇಶ್ ಗುಂಡೂರಾವ್ ವಂದೇ ಭಾರತ್ ಚಾಲನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಕ್ಕಳೊಂದಿಗೆ ಪ್ರಧಾನಿ ವಂದೇ ಭಾರತ್ ರೈಲಿನಲ್ಲಿ ಮಾತುಕತೆ ನಡೆಸಿದರು.

ಇದೇ ಸಮಯದಲ್ಲಿ ಅಮೃತ್‍ಸರ್ ದಿಂದ ಶ್ರ ಮಾತಾ ವೈಷ್ಣೋದೇವಿ ಕತ್ರಾ ಹಾಗೂ ನಾಗ್‍ಪುರ್ (ಅಜ್ನಿ) ಯಿಂದ ಪುಣೆಯ ವರೆಗೆ ಚಲಿಸಲಿರುವ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳಿಗೂ ಸಹ ವರ್ಚುವಲ್ ಮೂಲಕ ಚಾಲನೆ ನೀಡಲಾಯಿತು.

ಬೆಂಗಳೂರಿಂದ-ಬೆಳಗಾವಿಗೆ ಕೇವಲ 8.5 ಗಂಟೆಗಳಲ್ಲಿ 611 ಕಿ.ಮೀ ದೂರವನ್ನು ಕ್ರಮಿಸಲಿದೆ. ಹಾಲಿ ಇರುವ ರೈಲಿನ ಸೇವೆಗಳಿಗಿಂತ ಬೆಂಗಳೂರಿನಿಂದ ಬೆಳಗಾವಿಗೆ 1 ಗಂಟೆ 20 ನಿಮಿಷ ಮತ್ತು ಬೆಳಗಾವಿಯಿಂದ ಬೆಂಗಳೂರಿಗೆ ಸುಮಾರು 1 ಗಂಟೆ 40 ನಿಮಿಷ ಸಮಯ ಉಳಿಸಲಿದೆ ಎಂದು ಇಲಾಖೆ ತಿಳಿಸಿದೆ.

ಇದರ ಬೆನ್ನಲ್ಲೇ ಪ್ರಧಾನಿ ಮತ್ತು ಗಣ್ಯರು ರಸ್ತೆ ಮಾರ್ಗವಾಗಿ ಜೆಪಿ ನಗರದ ರಾಗಿಗುಡ್ಡ ಹಳದಿ ಮೆಟ್ರೋ ನಿಲ್ದಾಣದತ್ತ ತೆರಳುತ್ತಿದ್ದಾರೆ. ಅಲ್ಲಿ ಹಳದಿ ಮಾರ್ಗದ ಮೆಟ್ರೊಗೆ ಪ್ರಧಾನಿ ಚಾಲನೆ ನೀಡುವರು. ಈ ದಾರಿಯ ಇಕ್ಕೆಲಗಳಲ್ಲಿ ಮಳೆಯನ್ನೂ ಲೆಕ್ಕಿಸದೆ ಪ್ರಧಾನಿಯನ್ನು ನೋಡಲು ಜನಸಾಗರವೇ ಸೇರಿದೆ. ವಿ.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ರೈಲು ಸಂಚರಿಸಲಿದೆ. ಪ್ರಧಾನಿ ಮತ್ತು ಇತರ ಗಣ್ಯರು ಮೆಟ್ರೋದಲ್ಲಿ ಸಂಚರಿಸಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಳದಿ ಮಾರ್ಗಕ್ಕೆ ಕೇಂದ್ರ ನೀಡಿದ್ದು ಕೇವಲ ಶೇ 20ರಷ್ಟು ಅನುದಾನ: ಡಿಸಿಎಂ ಶಿವಕುಮಾರ್‌ ಆಕ್ರೋಶ