Select Your Language

Notifications

webdunia
webdunia
webdunia
webdunia

ದಿಢೀರನೇ ತುಮಕೂರು ಪ್ರವಾಸವನ್ನು ರದ್ದು ಮಾಡಿದ ಸಿಎಂ, ಇದೇ ಕಾರಣ

CM Siddaramaiah

Sampriya

ಬೆಂಗಳೂರು , ಶುಕ್ರವಾರ, 7 ನವೆಂಬರ್ 2025 (17:02 IST)
Photo Credit X
ಬೆಂಗಳೂರು: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ತುಮಕೂರು ಪ್ರವಾಸವನ್ನು ದಿಢೀರನೇ ರದ್ದು ಮಾಡಿದ್ದಾರೆ.  

ವಿಧಾನಸೌಧದಲ್ಲಿ ಸರಣಿ ಸಭೆ ನಡೆಯುತ್ತಿದೆ. ಕಾರ್ಖನೆ ಮಾಲೀಕರು, ರೈತರ ಜೊತೆ ಸಭೆ ಅಪೂರ್ಣವಾದ ಹಿನ್ನೆಲೆಯಲ್ಲಿ ಸಿಎಂ ತುಮಕೂರು  ಪ್ರವಾಸ ರದ್ದಾ ಮಾಡಿದ್ದಾರೆ. 

ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ಸಿಎಂಗೆ ಔತಣಕೂಟ ಏರ್ಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸಭೆ ಬಳಿಕ ಸಿದ್ದರಾಮಯ್ಯ ಅವರು ತುಮಕೂರಿಗೆ ಪ್ರವಾಸ ಬೆಳೆಸಲು ಯೋಜಿಸಿದ್ದರು. ಆದರೆ, ಈಗ ರಾಜಣ್ಣ ಔತಣಕೂಟಕ್ಕೆ ಸಿಎಂ ಮಿಸ್ ಆಗಿದ್ದಾರೆ.

ಟನ್‌ ಕಬ್ಬಿಗೆ 3,500 ಬೆಲೆ ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿ ರೈತರು ತೀವ್ರ ರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಗೆ ಸಿಎಂ ಪತ್ರ ಬರೆದಿರುವ ಹಿಂದಿನ ಗುಟ್ಟು ಬಿಚ್ಚಿಟ್ಟ ಎಚ್ ಡಿ ಕುಮಾರಸ್ವಾಮಿ