Publish Date: Sat, 11 Nov 2023 (20:44 IST)
Updated Date: Sat, 11 Nov 2023 (20:36 IST)
ಸಿಟಿ ರವಿ ಅಸಮಾಧಾನ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,ಈಗಾಗಲೇ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ.ಇದು ಅಧಿಕಾರ ಅಲ್ಲಾ ಜವಾಬ್ದಾರಿ.ಇದು ಕೇಳಿ ತಗೊಳುವ ಹುದ್ದೆಯಲ್ಲ.ನಾನು ಯಾವುದೇ ಹುದ್ದೆ ಆಕಾಂಕ್ಷೆಯಲ್ಲಾ ಅಂತಾ ಹೇಳಿದ್ದೆ.ಮೊದಲು ಬೂತ್ ಕಾರ್ಯಕರ್ತ ಆಗಿದ್ದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಕ್ಷದಲ್ಲಿ ಜವಾಬ್ದಾರಿ ಕೊಟ್ಟಿದೆ.ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕಿದೆ.ಕೇಳೆ ಇಲ್ಲಾ ಅಂದಾಗ ಅಸಮಾಧಾನ ಬರಲ್ಲ.ನಾವು ರಾಜಕೀಯಕ್ಕೆ ಬಂದಿದ್ದು ಸೈದ್ದಾಂತಿಕ ರಾಜಕೀಯ ಮಾಡೊದಕ್ಕೆ ಎಂದು ಸಿ ಟಿ ರವಿ ಹೇಳಿದ್ದಾರೆ.
ಕುಟುಂಬ ರಾಜಕೀಯ ವಿಚಾರವಾಗಿ ನಾನು ಮಾತಾಡಿದ್ರೆ ಅದು ತಪ್ಪು ಅರ್ಥವಾಗುತ್ತದೆ.ಎಲ್ಲೆಲ್ಲೆಗೋ ಕನೆಕ್ಟ್ ಆಗುತ್ತೆ ಈಗ ಉತ್ತರಿಸಲ್ಲ.ನಾನು ಪಕ್ಷದ ಕಟ್ಟಾಳು ಪಕ್ಷದ ನಿರ್ಣಯದ ವಿರುದ್ದ ಮಾತಾಡಿಲ್ಲ.ನಿರ್ಣಯ ಸರಿಯಿಲ್ಲ ಅನಿಸಿದ್ರೆ ವೇದಿಕೆ ಇದೆ.ಆದ್ರೆ ಪಾರ್ಟಿ ನಿರ್ಣಯ ತೆಗೆದಕೊಂಡಿರೋದಕ್ಕೆ ಅಸಮಾಧಾನ ಇಲ್ಲ.ನಾನು ರಾಜ್ಯಾದ್ಯಕ್ಷ ಆಕಾಂಕ್ಷೆಯಾಗಿರಲಿಲ್ಲ.ಎಲ್ಲಾ ಜಾಗದಲ್ಲಿ ಸತ್ಯವನ್ನ ಹೇಳಿದ್ರೆ ಅಪಾರ್ಥ ಬರುತ್ತೆ.ಮೋದಿಯವರನ್ನ ಮತ್ತೆ ಅಧಿಕಾರಕ್ಕೆ ತರೋದೆ ನಮ್ಮ ಗುರಿ.ವಿಶ್ವಗುರು ಭಾರತ ಆಗಬೇಕು ಅನ್ನೋ ಸಂಕಲ್ಪ ಮಾಡಿದ್ದೇವೆ.ಅದಕ್ಕೆ ಯಾವುದೇ ಕೊರತೆ ಆಗಬಾರದು.ಸಾಮಾನ್ಯ ಕಾರ್ಯಕರ್ತನಾಗಿ ಮತ್ತೆ ಮೋದಿ ಅಧಿಕಾರಕ್ಕೆ ತರೋದಕ್ಕೆ ಕೆಲಸ ಮಾಡ್ತಿನಿ.ನಾನೇನು ಸನ್ಯಾನಿಯಲ್ಲ.೨೦೨೪ ರ ನಂತರ ವೈಯಕ್ತಿಕ ರಾಜಕೀಯದ ಬಗ್ಗೆ ನೋಡಣ್ಣ ಎಂದು ಸಿಟಿ ರವಿ ಹೇಳಿದ್ದಾರೆ.