Publish Date: Sat, 11 Nov 2023 (20:23 IST)
Updated Date: Sat, 11 Nov 2023 (20:27 IST)
ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಅವಘಡಗಳು ಸಂಭವಿಸಿದ್ದಲ್ಲಿ ಕಣ್ಣಿಗೆ, ಚರ್ಮಕ್ಕೆ ಹಾನಿಯಾಗುವುದನ್ನು ತಡೆಗಟ್ಟಲು ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
ಹಬ್ಬದ ಸಮಯದಲ್ಲಿ 24X7 ಚಿಕಿತ್ಸೆ ನೀಡಲು ಬೆಂಗಳೂರು ನಗರದ ಮಿಂಟೊ ಮತ್ತು ವಿಕ್ಟೋರಿಯಾ ಆಸ್ಪತ್ರೆಗಳು ಸಜ್ಜಾಗಿವೆ. ಆಸ್ಪತ್ರೆಗೆ ಬರುವ ಗಾಯಾಳುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಮಿಂಟೋ ಕಣ್ಣಿನ ಆಸ್ಪತ್ರೆ ವೈದ್ಯರು ಮುಂದಿನ ಒಂದು ವಾರ 24X7 ಕಾರ್ಯನಿರ್ವಹಿಸಲಿದ್ದಾರೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.