Publish Date: Sat, 11 Nov 2023 (15:00 IST)
Updated Date: Sat, 11 Nov 2023 (15:04 IST)
ನಗರದಲ್ಲಿ ಮಾತನಾಡಿದ ಸಂಸದ ಪಿಸಿ ಮೋಹನ್ ಹೈಕಮಾಂಡ್ ನಾಯಕರಿಗೆ ಧನ್ಯವಾದ ಹೇಳಿದ್ದಾರೆ.ಅಲ್ಲದೇ ವಿಜಯೇಂದ್ರ ಅವ್ರು ಪಕ್ಷದಲ್ಲಿ ಸುಮಾರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.ವಿಜಯೇಂದ್ರ ಸಂಘಟನೆಯಲ್ಲಿ ಬಹಳ ಚತುರಗಾರ.ಅವರಿಗೆ ಕೊಟ್ಟ ಬೈ ಎಲೆಕ್ಸನ್ ಗಳನ್ನು ಗೆಲ್ಲಿಸಿದ್ದಾರೆ.ಮುಂಬರುವ ಲೋಕಸಭಾ ಚುನಾವಣೆ ಅವರ ನೇತೃತ್ವದಲ್ಲಿ ನಡೆಯಲಿದೆ.ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25ಸ್ಥಾನ ಗೆಲ್ಲುತ್ತೇವೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಲವರ ಆಸೆಗಳು ಸಹಜ ಹಾಗಂತ ಪಕ್ಷದಲ್ಲಿ ಯಾವುದೇ ಅಸಮಧಾನ ಇಲ್ಲ.ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ವಿಜಯೇಂದ್ರಗಿದೆ.ವಿಜಯೇಂದ್ರ ಭೇಟಿಗೂ ಮುನ್ನ ಸಂಸದ ಪಿಸಿ ಮೋಹನ್ ಹೇಳಿದ್ದಾರೆ.