Publish Date: Sun, 05 Nov 2023 (14:40 IST)
Updated Date: Sun, 05 Nov 2023 (13:44 IST)
ಮುಂದಿನ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಬಿಜೆಪಿ ಶಾಸಕ ವಿಜಯೇಂದ್ರರ ಬೆಂಬಲಿಗರು ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸದ ಬಳಿ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ.ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮುಂದಿನ ಸಿಎಂ ವಿಜಯೇಂದ್ರ ಎಂದು ಘೋಷಣೆ ಕೂಗಿದ್ದಾರೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಹೆಸರು ಪ್ರಬಲವಾಗಿ ಕೇಳಿ ಬರ್ತಿರುವ ಸಂದರ್ಭದಲ್ಲಿ ಈ ಘೋಷಣೆ ಮಹತ್ವ ಪಡೆದುಕೊಂಡಿದೆ.
ಇನ್ನೂ ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ವಿ ವೈ ವಿಜಯೇಂದ್ರನಮಗೆ ಆಪರೇಷನ್ ಮೇಲೆ ವಿಶ್ವಾಸ ಇಲ್ಲ.ಆರ್ಥಿಕ ಸಂಕಷ್ಟದಲ್ಲಿ ಸರ್ಕಾರ ಸಿಲುಕಿದೆ.ಆಡಳಿತ ಪಕ್ಷದ ಶಾಸಕರೇ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡದೇ ಇರುವ ಪರಿಸ್ಥಿತಿ ಬಂದಿದೆ.ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಕೂಡ ಮಾತಾಡ್ತಿಲ್ಲ.
ವಿಷಯ ಡೈವರ್ಟ್ ಮಾಡಲು ಆಪರೇಷನ್ ಬಗ್ಗೆ ಮಾತಾಡ್ತಿದ್ದಾರೆ.ನಮಗೆ ಆಪರೇಷನ್ ಬಗ್ಗೆ ವಿಶ್ವಾಸ ಇಲ್ಲ.ಅವರ ಪಕ್ಷದ ಶಾಸಕರೇ ತಿರುಗಿ ಬಿದ್ದು ಸರ್ಕಾರ ಉರುಳಿಸಿದ್ರು ಆಶ್ಚರ್ಯ ಇಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.