Publish Date: Sun, 05 Nov 2023 (10:33 IST)
Updated Date: Sun, 05 Nov 2023 (09:35 IST)
ಬೆಂಗಳೂರು: ಜಗತ್ತಿನಲ್ಲಿ ಕಳ್ಳತನಕ್ಕೂ ಒಂದೊಂದು ಕಾರಣವಿರುತ್ತದೆ ಎಂಬುದು ಬೆಂಗಳೂರಿನ ಗಿರಿನಗರದಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಮದ್ಯ ಸೇವಿಸಲು ಹಣ ಹೊಂದಿಸುವುದಕ್ಕಾಗಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ. ಈತನನ್ನು
ಈಗ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಒಂದು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕದ್ದು, ಅದರ ಬಿಡಿ ಭಾಗಗಳನ್ನು ಇನ್ನೊಂದು ಠಾಣಾ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ. ಬೈಕ್ ಕದ್ದು ಅದರ ಬ್ಯಾಟರಿಗಳನ್ನು ಮಾರಿ ಬಂದ ಹಣದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದ. ಈತನ ವಿರುದ್ಧ ಸುಮಾರು 15 ಪ್ರಕರಣಗಳು ದಾಖಲಾಗಿವೆ.