Publish Date: Sat, 04 Nov 2023 (10:11 IST)
Updated Date: Sat, 04 Nov 2023 (09:07 IST)
ಲಕ್ನೋ: ಉತ್ತರ ಭಾರತೀಯ ವಿವಾಹಿತ ಮಹಿಳೆಯರು ತಮ್ಮ ಗಂಡನ ಶ್ರೇಯಸ್ಸಿಗಾಗಿ ಕರ್ವ ಚೌತ್ ಉಪವಾಸ ವ್ರತ ಕೈಗೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಪತಿ ಮಹಾಶಯ ಇದೇ ವಿಚಾರಕ್ಕೆ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ!
ತವರಿಗೆ ಹೋಗಿದ್ದ ಪತ್ನಿ ಕರ್ವ ಚೌತ್ ಉಪವಾಸ ವ್ರತ ಮಾಡುವ ಹಬ್ಬಕ್ಕೆ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದ ಬೇಸರಗೊಂಡ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಎರಡು ತಿಂಗಳ ಹಿಂದೆ ಪತ್ನಿ ತವರಿಗೆ ಹೋಗಿದ್ದವಳು ಬಂದಿರಲಿಲ್ಲ. ಆತ್ಮಹತ್ಯೆಗೆ ಮುನ್ನ ಆಕೆಯನ್ನು ಮರಳಿ ಕಳುಹಿಸಿಕೊಡುವಂತೆ ಅತ್ತೆಯ ಜೊತೆ ಫೋನ್ ನಲ್ಲಿ ಜಗಳವಾಡಿದ್ದ. ಮರುದಿನ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.