Select Your Language

Notifications

webdunia
webdunia
webdunia
webdunia

ಬಿಜೆಪಿಗೆ ಮತ ಹಾಕಿದ್ರಿ, ನಿಮ್ಮ ಜೀವನ ಶೈಲಿ ಬದಲಾಗಿದೆಯೇ: ರಾಹುಲ್ ವಾಗ್ದಾಳಿ

bjp
delhi , ಶನಿವಾರ, 4 ನವೆಂಬರ್ 2023 (08:43 IST)
ಕಳೆದ  ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಮತ ಹಾಕಿದಿರಿ. ಇದರಿಂದ ನಿಮ್ಮ ಜೀವನ ಶೈಲಿ ಬದಲಾಗಿದೆಯೇ  ಮೇಕ್ ಇನ್ ಇಂಡಿಯಾ ಜನರಿಗೆ ಯಾವುದೇ ರೀತಿಯ ಉದ್ಯೋಗ ನೀಡಿಲ್ಲ . ಪ್ರಧಾನಿ ನರೇಂದ್ರ ಮೋದಿ ಭರವಸೆಗಳನ್ನು ನೀಡುತ್ತಾರೆಯೇ ಹೊರತು ಕೆಲಸ ಮಾಡುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ
 
 
ಅಧಿಕಾರಕ್ಕೆ ಬಂದರೆ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಬಿಜೆಪಿ ಮುಖಂಡರು ಹೇಳಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲಾ ವಸ್ತುವಿನ ಬೆಲೆಯೂ ಹೆಚ್ಚಳವಾಯಿತು. ಜನರಿಗೆ ದೊಡ್ಡ ದೊಡ್ಡ ಭರವಸೆಗಳನ್ನು ನೀಡಿದ ಪಕ್ಷ ತಾವು ನೀಡಿದ ಯಾವ ಭರವಸೆಗಳನ್ನು ಪರಿಪೂರ್ಣವಾಗಿ ನಿರ್ವಹಿಸಿಲ್ಲ. ನರೇಂದ್ರ ಮೋದಿ  ಅವರಿಂದ ಮುಂದೆ ಏನನ್ನೂ ಪಡೆಯಲು ಸಾಧ್ಯವಿಲ್ಲ.  ಹಿಂದು, ಮುಸ್ಲಿಂ ಎಂದು ಸಮುದಾಯಗಳಿಗಾಗಿ ಯುದ್ಧ ಮಾಡುತ್ತಾರೆ.
 
ಕಾಂಗ್ರೆಸ್ ಪಕ್ಷ ಕೌಮುಸೌಹಾರ್ದವನ್ನು ಬಯಸುತ್ತದೆ. ಕಾಂಗ್ರೆಸ್ ಗೆದ್ದರೆ.  ಸಂಪೂರ್ಣವಾಗಿ ಬದಲಾಯಿಸುತ್ತೇವೆ. ಬದಲಾವಣೆಯಲ್ಲಿ ಈಗಾಗಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನು ಸ್ವಲ್ಪ ದಿನಗಳಲ್ಲೇ ಕೈಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತದೆ.  ಪ್ರತಿಯೊಬ್ಬರಿಗೂ ಸ್ವಂತ ಮನೆ ದೊರೆಯುವಂತೆ ಕಾಂಗ್ರೆಸ್ ಮಾಡುತ್ತದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ.
 
ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಕೇಂದ್ರ ಸಚಿವೆ ಅವರ ಆರೋಪ ಕುರಿತು ಇದೇ ಮೊದಲ ಬಾರಿಗೆ ಮಾತನಾಡಿರುವ ರಾಹುಲ್,  ಅವರನ್ನು ಆದಿವಾಸಿಗಳ ಹಕ್ಕು ಹಾಗೂ ಪರಿಸರ ಸಂಕ್ಷಣೆಗಾಗಿ ಹೋರಾಟ ನಡೆಸುವಂತೆ ಹೇಳುತ್ತಿದ್ದೆ. ಆದರೆ ಅವರು ಯಾವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರ ಆರೋಪಗಳಿಗೆ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸಕ್ಕಿದ್ದ ಬಾಲಕಿಯ ಮೇಲೆ ರೇಪ್ ಎಸಗಿದ ಮನೆಮಾಲೀಕ