Select Your Language

Notifications

webdunia
webdunia
webdunia
webdunia

ಕೆಲಸಕ್ಕಿದ್ದ ಬಾಲಕಿಯ ಮೇಲೆ ರೇಪ್ ಎಸಗಿದ ಮನೆಮಾಲೀಕ

ಕೆಲಸಕ್ಕಿದ್ದ ಬಾಲಕಿಯ ಮೇಲೆ ರೇಪ್ ಎಸಗಿದ ಮನೆಮಾಲೀಕ
delhi , ಶನಿವಾರ, 4 ನವೆಂಬರ್ 2023 (08:20 IST)
ಸಂತ್ರಸ್ತೆ ಸುಮಾರು 6 ತಿಂಗಳಕಾಲ ಅಧಿಕಾರಿಯ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಅಧಿಕಾರಿಯ ಮಾವ ಇಂತಹ ನೀಚ ಕೃತ್ಯ ಎಸಗಿದ್ದಾನೆ. ಮತ್ತು ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿದ್ದಾನೆ.  ಈ ಬಗ್ಗೆ ಹುಡುಗಿ ತನ್ನ ತಾಯಿಯ ಬಳಿ ಹೇಳಿದ್ದು, ತಾಯಿ ಪೊಲೀಸರನ್ನು ಸಂಪರ್ಕಿಸಿದಾಗ ವಿಚಾರ ಬೆಳಕಿಗೆ ಬಂದಿದೆ.
 
ಒಡಿಶಾದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರ 85 ವರ್ಷದ ಮಾವ ಮನೆ ಕೆಲಸ ಮಾಡುತ್ತಿದ್ದ 15 ವರ್ಷದ ಬುಡಕಟ್ಟು ಜನಾಂಗದ ಹುಡುಗಿಯ ಮೇಲೆ ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
 
ಅಪ್ರಾಪ್ತೆ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡಿದ್ದಕ್ಕೆ ಈ ಬಗ್ಗೆ ಪೊಲೀಸರು ಅಧಿಕಾರಿಯ ವಿರುದ್ಧ  ದೂರು ದಾಖಲಿಸಿದ್ದಾರೆ. ಮತ್ಯು ಮಾವನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.ಹಾಗೂ  ಆರೋಪಿಗಳಿಬ್ಬರು ಪರಾರಿಯಾದ ಹಿನ್ನಲೆಯಲ್ಲಿ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

AICC ನಾಯಕರಿಗೆ ಕರ್ನಾಟಕ ಎಟಿಎಂ: ಬಿ.ಎಸ್‌.ಯಡಿಯೂರಪ್ಪ