Select Your Language

Notifications

webdunia
webdunia
webdunia
webdunia

ಇದು ಮೋದಿ ಅನ್ಯಾಯ. ಅವರು ಚುನಾವಣೆಯಲ್ಲಿ ಸೋಲ್ತಾರೆ- ದಿನೇಶ್‌ ಅರೋರಾ

Dinesh Arora
bangalore , ಶನಿವಾರ, 7 ಅಕ್ಟೋಬರ್ 2023 (16:23 IST)
ಮದ್ಯ ಉದ್ಯಮಿ ದಿನೇಶ್‌ ಅರೋರಾ ಅವರು ಸಿಂಗ್‌ ಅವರಿಗೆ 3 ಕೋಟಿ ರು. ನೀಡಿದ್ದರು ಮತ್ತು ಈ ಮೊತ್ತವು ದೆಹಲಿ ಮದ್ಯ ನೀತಿ ಪ್ರಕರಣದ ಭಾಗವಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗ್‌ ಅವರ ವಿಚಾರಣೆ ಅಗತ್ಯವಾಗಿದ್ದು, 10 ದಿನ ಕಾಲ ವಶಕ್ಕೆ ನೀಡಬೇಕು ಎಂದು ಕೋರ್ಟ್‌ಗೆ ಇ.ಡಿ. ಮನವಿ ಮಾಡಿತು. ಆದರೆ ಇದನ್ನು ಸಂಜಯ ಸಿಂಗ್‌ ವಿರೋಧಿಸಿ, ಆರೋಪಗಳೆಲ್ಲ ನಿರಾಧಾರ ಎಂದರು. ಕೊನೆಗೆ ಅ.10ರವರೆಗೆ ಇ.ಡಿ. ವಶಕ್ಕೆ ಸಿಂಗ್‌ರನ್ನು ಒಪ್ಪಿಸಿ ಕೋರ್ಟ್‌ ಆದೇಶ ಹೊರಡಿಸಿತು. ಈ ನಡುವೆ, ಕೋರ್ಟ್‌ ಹೊರಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಂಜಯ ಸಿಂಗ್‌, ‘ಇದು ಮೋದಿ ಅವರ ಅನ್ಯಾಯ. ಅವರು ಚುನಾವಣೆಯಲ್ಲಿ ಸೋಲುತ್ತಾರೆ ನೋಡುತ್ತಿರಿ’ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಬುಲೆಟ್‌ ರೈಲು ಮಾರ್ಗದ ಸುರಂಗ ನಿರ್ಮಾಣ ಯಶಸ್ವಿ