Select Your Language

Notifications

webdunia
webdunia
webdunia
webdunia

ಮೊದಲ ಬುಲೆಟ್‌ ರೈಲು ಮಾರ್ಗದ ಸುರಂಗ ನಿರ್ಮಾಣ ಯಶಸ್ವಿ

ಮೊದಲ ಬುಲೆಟ್‌ ರೈಲು ಮಾರ್ಗದ ಸುರಂಗ ನಿರ್ಮಾಣ ಯಶಸ್ವಿ
ಮಹಾರಾಷ್ಟ್ರ , ಶನಿವಾರ, 7 ಅಕ್ಟೋಬರ್ 2023 (15:20 IST)
ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್‌ನ ಅಹಮದಾಬಾದ್ ನಡುವಿನ ದೇಶದ ಮೊದಲ ಬುಲೆಟ್‌ ರೈಲು ಹಳಿ ಮಾರ್ಗದಲ್ಲಿ ಮೊದಲ ಸುರಂಗ ನಿರ್ಮಾಣವು  ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ನ್ಯಾಷನಲ್‌ ಹೈಸ್ಪೀಡ್‌ ರೈಲು ಕಾರ್ಪೋರೇಶನ್ ಲಿಮಿಟೆಡ್‌ ತಿಳಿಸಿದೆ.ಗುಜರಾತ್‌ನ ವಲ್ಸದ್‌ ಜಿಲ್ಲೆಯ ಜರೋಲಿ ಗ್ರಾಮದ ಬಳಿ ಇರುವ ಈ ಸುರಂಗವನ್ನು ಹೊಸ ಆಸ್ಟ್ರಿಯನ್‌ ಸುರಂಗ ವಿಧಾನ ಬಳಸಿಕೊಂಡು ಪರ್ವತ ಕೊರೆದು 10 ತಿಂಗಳ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸುರಂಗವು 350 ಮೀಟರ್‌ ಉದ್ದ, 12.6 ಮೀ. ವ್ಯಾಸ ಹಾಗೂ 10.25 ಮೀ. ಎತ್ತರ ಹೊಂದಿದೆ.ಈ ಬುಲೆಟ್‌ ರೈಲು ಮಾರ್ಗದಲ್ಲಿ ಒಟ್ಟು 7 ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಎಚ್‌ HSRCL ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

1-10 ನೇ ತರಗತಿಗಳ ಸಂಪೂರ್ಣ ಪಠ್ಯಪುಸ್ತಕ ಪರಿಷ್ಕರಣೆಗೆ ವಿರೋಧ