Select Your Language

Notifications

webdunia
webdunia
webdunia
webdunia

ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!

ಸಿಟಿ ಬಸ್ ನಲ್ಲಿ ಕಳ್ಳರ ಕೈಚಳಕ; ಮಹಿಳೆ ಪರೇಶಾನ್!
ಹುಬ್ಬಳ್ಳಿ , ಮಂಗಳವಾರ, 12 ಫೆಬ್ರವರಿ 2019 (18:56 IST)
ಸಿಟಿ ಬಸ್ ನಲ್ಲಿ ಚಳ್ಳರು ತಮ್ಮ ಕೈಚಳಕ ತೋರಿ ಮಹಿಳೆಯೊಬ್ಬರನ್ನು ಯಾಮಾರಿಸಿದ ಘಟನೆ ನಡೆದಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವಳ ಬ್ಯಾಗ್ ನಲ್ಲಿದ್ದ ಬಂಗಾರದ ಚೈನ್ ಹಾಗೂ ನಗದು ದೋಚಿ ಕಳ್ಳರು ಪರಾರಿಯಾದ ಘಟನೆ ನಡೆದಿದೆ. ಹುಬ್ಬಳ್ಳಿ ನಗರದ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ.

ಬೈರಿದೇವರಕೊಪ್ಪದ ರೇಖಾ ಪ್ರಭಾಕರ ನೇತ್ರಾಣಿ ಎಂಬುವರು ತಮ್ಮ ಮಗಳು ಪೂಜಾಳೊಂದಿಗೆ ನಗರಕ್ಕೆ ಬಸ್ ನಲ್ಲಿ ಆಗಮಿಸುತ್ತಿದ್ದಾಗ ಅವರ ವ್ಯಾನಿಟಿ ಬ್ಯಾಗ್ ದಲ್ಲಿದ್ದ 18 ಗ್ರಾಂ. ಚಿನ್ನದ ಚೈನ್ ಹಾಗೂ 5 ಸಾವಿರ ರೂ. ನಗದನ್ನು ಜೇಬುಗಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಪತಿ ಅಂಗಳಕ್ಕೆ ಆಡಿಯೋ ದೂರು!