Select Your Language

Notifications

webdunia
webdunia
webdunia
Sunday, 13 April 2025
webdunia

ರೆಡ್ ಹ್ಯಾಂಡಾಗಿ ತಗಲ್ಹಾಕೊಂಡ ಖದೀಮನಿಗೆ ಸಿಕ್ತು ಸಖತ್ ಗೂಸಾ!

ಬ್ಯಾಟರಿ
ಮೈಸೂರು , ಶುಕ್ರವಾರ, 8 ಫೆಬ್ರವರಿ 2019 (14:04 IST)
ಮಾಡಬಾರದ ಕೆಲಸ ಮಾಡುವಾಗ ಖದೀಮನೊಬ್ಬ ರೆಡ್ ಹ್ಯಾಂಡ್ ಆಗಿ ತಗಲ್ಹಾಕಿಕೊಂಡಿದ್ದಾನೆ. ಸೆರೆಸಿಕ್ಕವನಿಗೆ ಜನರು ಸರಿಯಾಗಿ ಧರ್ಮದೇಟು ನೀಡಿದ್ದಾರೆ. 

ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡ್ ಆಗಿ ಸೆರೆಸಿಕ್ಕ ಕಳ್ಳನಿಗೆ ಸಖತ್ ಗೂಸಾ ನೀಡಲಾಗಿದೆ. ಬ್ಯಾಟರಿ ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ತಗಲಾಕಿಕೊಂಡ ಕಳ್ಳನಿಗೆ ಜನರು ಸರಿಯಾಗಿ ಪಾಠ ಕಲಿಸಿದ್ದಾರೆ. ಮೈಸೂರು ಜಿಲ್ಲೆ ಕೆ ಆರ್ ನಗರ ತಾಲೂಕಿನ ಕೆಸ್ತೂರು ಗೇಟ್  ಗ್ರಾಮದಲ್ಲಿ ಘಟನೆ ನಡೆದಿದೆ.

ಕೆಸ್ತೂರು ಗೇಟ್ ನ ಗುರುಮಲ್ಲೇಗೌಡ ಎಂಬುವರಿಗೆ ಸೇರಿದ ಟ್ಯಾಕ್ಟರ್ ಬ್ಯಾಟರಿ ಬಿಚ್ಚುವಾಗ ಕಳ್ಳನನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಕಳ್ಳನಿಗೆ ಥಳಿಸಿ ಮರಕ್ಕೆ ಕಟ್ಟಿಹಾಕಿ  ಸ್ಲೇಟ್ ಕಳ್ಳ ಅಂತಾ ಕೊರಳಿಗೆ ಸ್ಲೇಟ್ ನ್ನು ಜನರು ಹಾಕಿದ್ದಾರೆ. ಒಟ್ಟು ಮೂರು ಜನರು ಕಳ್ಳರಲ್ಲಿ ಒಬ್ಬನನ್ನು ಹಿಡಿಯಲಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ದೋಸ್ತಿ ಸರಕಾರದ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಗರ್ಭಿಣಿಯರಿಗೆ ಬಂಪರ್ ಆಫರ್