Select Your Language

Notifications

webdunia
webdunia
webdunia
webdunia

ಆತ ಮೊಬೈಲ್ ಎಗರಿಸಿದ್ದು ಹೇಗೆ ಗೊತ್ತಾ?

ಆತ ಮೊಬೈಲ್ ಎಗರಿಸಿದ್ದು ಹೇಗೆ ಗೊತ್ತಾ?
ಆನೇಕಲ್ , ಬುಧವಾರ, 6 ಫೆಬ್ರವರಿ 2019 (18:20 IST)
ಆತ ಹೈಫೈನಂತೆ ಕಂಡುಬರುತ್ತಿದ್ದ ವ್ಯಕ್ತಿಯಾಗಿದ್ದ. ಆದರೆ ಕ್ಷಣಮಾತ್ರದಲ್ಲಿ ಮೊಬೈಲ್ ಎಗರಿಸಿ ಅಂಗಡಿ ಮಾಲೀಕನನ್ನೇ ಬೇಸ್ತುಬೀಳಿಸಿ ಪರಾರಿಯಾಗಿ ತನ್ನ ಕೈಚಳಕ ತೋರಿದ್ದಾನೆ.

ಖತರನಾಕ್ ಕಳ್ಳನೊಬ್ಬನ ಕೈಚಳಕಕ್ಕೆ ಮೊಬೈಲ್ ಅಂಗಡಿಯ ಮಾಲೀಕನೊಬ್ಬ ದಂಗಾಗಿ ಹೋಗಿದ್ದಾರೆ. ಬೆಂಗಳೂರು
ಹೊರವಲಯ ಆನೇಕಲ್ ಪಟ್ಟಣದ ಶ್ರೀ ರಾಮ ಸರ್ಕಲ್ ನಲ್ಲಿರುವ ಮೋನಿತಾ ಮೊಬೈಲ್ಸ್  ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.
ಮೊಬೈಲ್ ಕದಿಯುತ್ತಿರುವ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿವೋ ವೈ 81 ಮಾಡೆಲ್ ನ 15000 ರೂ ಬೆಲೆ ಬಾಳುವ ಮೊಬೈಲ್ ಕಳ್ಳತನಮಾಡಿದ್ದಾನೆ.

ಹೋಂಡಾ ಆಕ್ಟೀವ್ ಬೈಕ್ ನಲ್ಲಿ ಬಂದ ಇಬ್ಬರು ಖದೀಮರಿಂದ ಕೃತ್ಯ ನಡೆದಿದೆ. ಮೊಬೈಲ್ ಕದ್ದು ಕ್ಷಣಾರ್ಧದಲ್ಲಿ ಎಸ್ಕೇಪ್ ಆದ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಸುತ್ತೂರು ಶ್ರೀಕ್ಷೇತ್ರದಲ್ಲಿ ಜಾತ್ರಾ ವೈಭವ