ವ್ಯಕ್ತಿಯೊಬ್ಬ ಮಹಿಳೆಯರ ಬೂಟ್ ಕಳ್ಳತನ ಮಾಡುತ್ತಿರುವುದು ಯಾಕೆಂದು ಕೇಳಿದ್ರೆ ಶಾಕ್ ಆಗ್ತೀರಾ?

ಶುಕ್ರವಾರ, 8 ಫೆಬ್ರವರಿ 2019 (07:01 IST)
ಜಪಾನ್ : ಜಪಾನಿನಲ್ಲಿ ವ್ಯಕ್ತಿಯೊಬ್ಬ ಲೈಂಗಿಕ ಸುಖಕ್ಕಾಗಿ ಮಹಿಳೆಯರ ಬೂಟ್ ಕಳ್ಳತನ ಮಾಡುತ್ತಿದ್ದ ವಿಚಿತ್ರವಾದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


ಮಕೊಟೊ( 40) ಮಹಿಳೆಯರ ಬೂಟ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿ. ಈತ ಹೆಚ್ಚಾಗಿ ಮಹಿಳೆಯ ಶೂಗಳನ್ನು ಕಳ್ಳತನ ಮಾಡುತ್ತಿದ್ದು, ಅದರಿಂದ ಬರುವ ವಾಸನೆಯಿಂದ ಆತ  ಲೈಂಗಿಕ ಸುಖ ಪಡೆಯುತ್ತಿದ್ದಾನಂತೆ. ಅದರಲ್ಲೂ ಹಳೆ ಶೂನಿಂದ ಬರ್ತಿದ್ದ ವಾಸನೆ ಆತನಿಗೆ ಹೆಚ್ಚು ಸುಖ ನೀಡುತ್ತಿದ್ದ ಕಾರಣ ಆತ ಮಹಿಳೆಯರ ಹಳೆ ಶೂ ಅನ್ನೇ ಹೆಚ್ಚು ಕಳ್ಳತನ ಮಾಡುತ್ತಿದ್ದನಂತೆ. ಒಂದು ವೇಳೆ ಮಹಿಳೆಯರ ಶೂ ಸಿಗದಿದ್ದಾಗ ಪುರುಷರ ಶೂ ಕಳ್ಳತನ ಮಾಡುತ್ತಿದ್ದನಂತೆ.


ಹೀಗೆ ಮಹಿಳೆಯ ಶೂ ಕಳ್ಳತನ ಮಾಡುತ್ತಿದ್ದ ಮಕೊಟೊವನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಮಕೊಟೊ ಮನೆಯಲ್ಲಿದ್ದ 70 ಜೊತೆ ಶೂಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕೊಟೊ ಕದ್ದಿದ್ದ ಶೂ ಬೆಲೆ 1 ಲಕ್ಷ 94 ಸಾವಿರ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತನ್ನ ಕಾರು ಚಾಲಕನನ್ನು ತುಂಡು ತುಂಡಾಗಿ ಕತ್ತರಿಸಿ ಆ್ಯಸಿಡ್ ಹಾಕಿ ಸುಟ್ಟ ವೈದ್ಯ. ಕಾರಣವೇನು ಗೊತ್ತಾ?