ಅತ್ತ ಪ್ರವಾಹಕ್ಕೆ ಸಿಲುಕಿ ಜನರು ಕಂಗಾಲು; ಇತ್ತ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಟ್ವೀಟ್ ವಾರ್

ಗುರುವಾರ, 8 ಆಗಸ್ಟ್ 2019 (11:23 IST)
ಬೆಂಗಳೂರು : ರಾಜ್ಯದೆಲ್ಲೆಡೆ ಸುರಿಯುತ್ತಿರುವ ಬಾರೀ ಮಳೆಗೆ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋಗುತ್ತಿರುವಾಗ ಇತ್ತ ಕಡೆ ಬಿಜೆಪಿ ಹಾಗೂ ಜೆಡಿಎಸ್  ಟ್ವೀಟ್ ವಾರ್ ನಡೆಸುತ್ತಿದ್ದಾರೆ.
ಸಿಎಂ ದೆಹಲಿ ಪ್ರವಾಸದ ಕುರಿತು ಟೀಕೆ ಮಾಡಿದ ಜೆಡಿಎಸ್, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಅನೇಕ ಪ್ರದೇಶಗಳು ಮುಳುಗಿ ಹೋಗಿವೆ. ಹೀಗಿರುವಾಗಿ ಸಿಎಂ ದೆಹಲಿ ಪ್ರವಾಸ ಕೈಗೊಂಡಿರುವುದು ಎಷ್ಟು ಸರಿ? ಎಂದು ಟ್ವೀಟ್ ಮಾಡಿದೆ.


ಇದಕ್ಕೆ ತಿರುಗೇಟು ನೀಡಿದ ಬಿಜೆಪಿ, ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರು ಪ್ರವಾಹ ಪೀಡಿತರಿಗೆ ಬಿಸ್ಕತ್ ಎಸೆದ ಘಟನೆಯನ್ನು ನೆನೆದಿದೆ. ಕಳೆದ ಬಾರಿ ಪ್ರವಾಹ ಉಂಟಾದಾಗ ಮುಖ್ಯಮಂತ್ರಿ ಆಗಿದ್ದವರು ಪಂಚತಾರಾ ಹೋಟೆಲ್ ನಲ್ಲಿದ್ದರು. ಪ್ರವಾಹ ಪೀಡಿತರಿಗೆ ಆಹಾರವನ್ನು ಎಸೆಯುವ ಮೂಲಕ ಅವಮಾನ ಮಾಡಿದ್ದ ಪಕ್ಷದಿಂದ ನಾವು ಏನನ್ನು ಕಲಿಯುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರವಾಹ ಪೀಡಿತ ಪ್ರದೇಶದ ಜನ, ಜಾನುವಾರುಗಳ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿದೆ- ಸಿಎಂ ಯಡಿಯೂರಪ್ಪ ಭರವಸೆ