Select Your Language

Notifications

webdunia
webdunia
webdunia
webdunia

ಅಗ್ನಿಪಥ್ ಆಕಾಂಕ್ಷಿಗಳಿಗಿಲ್ಲ ಸೂಕ್ತ ವ್ಯವಸ್ಥೆ

ಅಗ್ನಿಪಥ್ ಆಕಾಂಕ್ಷಿಗಳಿಗಿಲ್ಲ ಸೂಕ್ತ ವ್ಯವಸ್ಥೆ
bangalore , ಶನಿವಾರ, 13 ಆಗಸ್ಟ್ 2022 (20:43 IST)
ದೇಶದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಅಗ್ನಿಪಥ್ ಆಯ್ಕೆಗೆ ಬಂದ ಆಕಾಂಕ್ಷಿಗಳಿಗೆ ಸರಿಯಾದ ಮೂಲಭೂತ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ನೆಲೆಸಲು ಸ್ಥಳವಿಲ್ಲದೆ ರಸ್ತೆ ಬದಿ ವಾಸಿಸುತ್ತಿದ್ದು, ನರಕ ಯಾತನೆ ಅನುಭವಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಅಗ್ನಿಪಥ್ ‌ಆಯ್ಕೆ ರ್ಯಾಲಿಗಾಗಿ ಅಭ್ಯರ್ಥಿಗಳು ಬಂದಿದ್ದು, ಅದರಲ್ಲಿ ಬಹಷ್ಟು ಜನ ಉತ್ತರ ಕರ್ನಾಟಕದಿಂದಲೇ ಬಂದಿದ್ದು, ಅವರಿಗೆ ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲ. ಉಳಿಯಲು ವ್ಯವಸ್ಥೆ  ಮಾಡಲಾಗಿದ್ದ ಕೊಠಡಿಗಳು ಭರ್ತಿಯಾದ ಹಿನ್ನೆಲೆಯಲ್ಲಿ ಮಧ್ಯ ರಾತ್ರಿ ಉಳಿಯಲು ಅವಕಾಶವಿಲ್ಲದೆ ಯುವಕರು ರ್ಯಾಲಿ ನಡೆಯುತ್ತಿರೋ ಜಿಲ್ಲಾ ಕ್ರೀಡಾಂಗಣದ ಸುತ್ತಮುತ್ತ ಮಳೆ, ಚಳಿಯಲ್ಲಿ ನಡುಗುತ್ತಾ ರಸ್ತೆ ಬದಿ ಮಲಗಿ ಕಾಲ ಕಳೆದಿದ್ದಾರೆ. ದೇಶ ಕಾಯಲು ಬಯಸಿ ಬಂದ ಯುವಕರ ಸ್ಥಿತಿ ಕಂಡು ಸಾರ್ವಜನಿಕರು ವ್ಯಾಪಕವಾಗಿ ಖಂಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವರುಣಾರ್ಭಟಕ್ಕೆ ಹಲವು ಮನೆಗಳು ನೆಲಸಮ