Select Your Language

Notifications

webdunia
webdunia
webdunia
webdunia

ಚಾಮರಾಜಪೇಟೆ ಮೈದಾನಕ್ಕೆ ಖಾಕಿ ಭದ್ರತೆ

ಚಾಮರಾಜಪೇಟೆ ಮೈದಾನಕ್ಕೆ ಖಾಕಿ ಭದ್ರತೆ
bangalore , ಶನಿವಾರ, 13 ಆಗಸ್ಟ್ 2022 (20:07 IST)
ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲು ಕಂದಾಯ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮೈದಾನ ಬಳಿ ಪೊಲೀಸರು ನಿನ್ನೆಯಿಂದಲೇ ಬಿಗಿ ಭದ್ರತೆ ಕೈಗೊಂಡಿದ್ದಾರೆ. ಮೈದಾನದ ಬಳಕೆ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಪೊಲೀಸರು ಈಗಾಗಲೇ ಶಾಂತಿ ಸಭೆಗಳನ್ನು ನಡೆಸಿದ್ದಾರೆ.ಆದರೆ, ಕೆಲ ಕಿಡಿಗೇಡಿಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವುದಾಗಿ ಗುಪ್ತಚರ ಅಧಿಕಾರಿಗಳು ಎಚ್ಚರಿಸಿದ್ದಾರೆ. ಇದೇ ಕಾರಣಕ್ಕೆ ಮೈದಾನ ಹಾಗೂ ಸುತ್ತಮುತ್ತ 600ಕ್ಕೂ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿ ನಿನ್ನೆ ಪಥಸಂಚಲನ ನಡೆಸಿದ ಪೊಲೀಸರು, ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಕೆ ರವಾನಿಸಿದರು. ಚಾಮರಾಜಪೇಟೆಯನ್ನು ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. KSRP, ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಧ್ವಜಾರೋಹಣ ನೆರವೇರಿಸಲು ಕ್ರಮ ಕೈಗೊಳ್ಳಲಾಗಿದ್ದು, ಆಹ್ವಾನ ಇದ್ದವರಿಗೆ ಮಾತ್ರ ಮೈದಾನದಲ್ಲಿ ಪ್ರವೇಶವಿರಲಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕ್ ಖರ್ಗೆಯಿಂದ ಮಹಿಳಾ ಕುಲಕ್ಕೆ ಅಪಮಾನ