Publish Date: Tue, 05 Jul 2022 (15:17 IST)
Updated Date: Tue, 05 Jul 2022 (15:25 IST)
ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ವಕ್‍ಬೋರ್ಡ್‍ಗೆ ಬಿಬಿಎಂಪಿ ಮತ್ತೊಂದು ನೋಟಿಸ್ ನೀಡಿದೆ. ಮೈದಾನ ವಕ್ ಬೋರ್ಡ್ ಸ್ವತ್ತು ಎಂದು ದಾಖಲೆ ಮಾಡಿಕೊಡುವಂತೆ ಮಾಡಿದ್ದ ಮನವಿಗೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತರು ಮತ್ತಷ್ಟು ದಾಖಲೆಗಳನ್ನು ನೀಡಿ ಎಂದು ನೋಟಿಸ್ ನೀಡಿದ್ದಾರೆ.
ಏಳು ದಿನಗಳ ಒಳಗಾಗಿ ಇದನ್ನು ನೀಡಬೇಕೆಂದು ಸೂಚಿಸಲಾಗಿದೆ.
ಸುಪ್ರೀಂಕೋರ್ಟ್‍ನಲ್ಲಿ ದಾಖಲಾಗಿರುವ ಸಿವಿಲ್ ಪ್ರಕರಣ(ಅಪಿಲ್ ನಂ.479)ದ ಸಂಬಂಸಿದಂತೆ 1962ರ ನ್ಯಾಯಾಲಯದ ಆದೇಶವನ್ನು ದೃಢೀಕರಣದ ಪತ್ರ, 1958ರ ಜೂ.30ರಂದು ಬೆಂಗಳೂರಿನ ಪ್ರಿನ್ಸಿಪಲ್ ಸಿವಿಲ್ ನ್ಯಾಯಾೀಧಿಶರ ಆದೇಶ ಪ್ರತಿ, ಸ್ವತ್ತಿನ ಮೂಲ ಪತ್ರ, ಕ್ರಯ, ಸ್ವತ್ತಿನ ಪಹಣಿ, 1968ರಿಂದ ತಹಾಲ್‍ವರೆಗಿನ ತಹಸೀಲ್ದಾರ್ ಅವರ ದೃಢೀಕರಣ ಪತ್ರ, ಬೆಂಗಳೂರು ಡೆವಪ್‍ಮೆಂಟ್ ಬೋರ್ಡ್ ಅವರ ನಕ್ಷ ದೃಢೀಕರಣ ಪತ್ರ, ಸರ್ಕಾರದಿಂದ ಬಂದಿರುವ ಆಸ್ತಿ ಪ್ರಕಟಣಾ ಪತ್ರ, ಭೂ ಮಾಪನ ದಾಖಲೆಯಿಂದ ದೃಢೀಕರಣ, ಇಸಿ ಫಾರಂ, 1968ರಿಂದ ಈ ತಹಾಲ್‍ವರೆಗಿನ ದೃಢೀಕರಣ ಸೇರಿ 8 ದಾಖಲೆಗಳನ್ನು ನೀಡುವಂತೆ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.