Select Your Language

Notifications

webdunia
webdunia
webdunia
webdunia

ಭಾರತವಾಗಲಿದೆ ವಿಶ್ವಗುರು : ಅಮಿತ್ ಶಾ

webdunia
ಹೈದರಾಬಾದ್ , ಸೋಮವಾರ, 4 ಜುಲೈ 2022 (07:36 IST)
ಹೈದರಾಬಾದ್ : ಮುಂದಿನ 30 ರಿಂದ 40 ವರ್ಷಗಳೂ ಬಿಜೆಪಿ ಯುಗವಾಗಿರಲಿದ್ದು, ಭಾರತವು `ವಿಶ್ವಗುರು’ ಆಗಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.

ಇಂದು ಹೈದರಾಬಾದ್ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ವಂಶಪಾರಂಪರ್ಯ ರಾಜಕಾರಣ, ಜಾತೀಯತೆ ಹಾಗೂ ತುಷ್ಟೀಕರಣದ ರಾಜಕೀಯ ಮಹಾಪಾಪ. ಹಲವು ವರ್ಷಗಳಿಂದ ದೇಶ ಈ ಪಾಪವನ್ನು ಅನುಭವಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಗೃಹ ಸಚಿವರ ಭಾಷಣದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಪಕ್ಷವು ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಹಾಗೂ ತುಷ್ಟೀಕರಣ ರಾಜಕೀಯವನ್ನು ಕೊನೆಗಾಣಿಸಲಿದೆ.

ದೇಶದ ಮತ್ತು ಜನರ ಅಭಿವೃದ್ಧಿ, ಸಾಧನೆಗಳ ಮೂಲಕ ಪಕ್ಷವನ್ನು ಜನರು ಮಾತನಾಡುವಂತಾಗಬೇಕು ಎಂಬುದನ್ನು ಶಾ ಒತ್ತಿಹೇಳಿರುವುದಾಗಿ ವಿವರಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರವಾಹಕ್ಕೆ ಕೊಚ್ಚಿ ಹೋದ ಚೀನಾ!