Select Your Language

Notifications

webdunia
webdunia
webdunia
Thursday, 17 April 2025
webdunia

ನೂತನ ಸ್ಪೀಕರ್ ಆಗಿ ನಾರ್ವೇಕರ್ ಆಯ್ಕೆ

ಮಹಾರಾಷ್ಟ್ರ
ಮುಂಬೈ , ಸೋಮವಾರ, 4 ಜುಲೈ 2022 (12:48 IST)
ಮುಂಬೈ : ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಭಾನುವಾರ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ.
 
ಮೊದಲ ಬಾರಿಗೆ ಬಿಜೆಪಿ ಶಾಸಕ ಮತ್ತು ಕೊಲಾಬಾ ಶಾಸಕ ನಾರ್ವೇಕರ್ ಶಿವಸೇನಾ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಆಗಿದ್ದ ರಾಜನ್ ಸಾಲ್ವಿ ಅವರನ್ನು ಸ್ಪೀಕರ್ ಚುನಾವಣೆಯಲ್ಲಿ ಸೋಲಿಸಿದರು.

ಶಿಂಧೆ ಬಣದ ಬಿಜೆಪಿ ಅಭ್ಯರ್ಥಿಯಾದ ನಾರ್ವೇಕರ್ 164 ಮತಗಳನ್ನು ಪಡೆದರೆ, ಸಲ್ವಿ 107 ಮತಗಳನ್ನಷ್ಟೇ ಗಳಿಸಲು ಸಾಧ್ಯವಾದರು.

ಈ ಬಗ್ಗೆ ಉಪಸಭಾಪತಿ ನರಹರಿ ಜಿರ್ವಾಲ್ ಮಾತನಾಡಿ, ಶಿಂಧೆ ಬಣ ಪಕ್ಷದ ವಿಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದಾಗಿ ಬಿಜೆಪಿ ಜಯ ದಾಖಲಿಸಿದೆ ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಸುಂದರವಾಗಿಲ್ಲ ಅಂತ ಹತ್ಯೆಗೈದ ಪತಿ!