Select Your Language

Notifications

webdunia
webdunia
webdunia
webdunia

ಪ್ರಿಯಾಂಕ್ ಖರ್ಗೆಯಿಂದ ಮಹಿಳಾ ಕುಲಕ್ಕೆ ಅಪಮಾನ

Priyank Kharge insults women
bangalore , ಶನಿವಾರ, 13 ಆಗಸ್ಟ್ 2022 (19:59 IST)
ಪ್ರಿಯಾಂಕ್ ಖರ್ಗೆಯ ಲಂಚ, ಮಂಚ ಹೇಳಿಕೆ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಇಡೀ ಮಹಿಳಾ ಕುಲಕ್ಕೆ ಅಪಮಾನ ಮಾಡಿದ್ದಾರೆ. ಯಾವ ಮಹಿಳೆಯೂ ಈ ಹೇಳಿಕೆಯನ್ನ ಸಹಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು. ಇದು ಅವರ ಕೀಳು ಅಭಿರುಚಿ ತೋರಿಸುತ್ತಿದೆ. ಮಹಿಳಾ ಸಮುದಾಯಕ್ಕೆ ಅವರು ಈ ಕೂಡಲೇ ಕ್ಷಮೆ ಕೇಳಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಾಕಷ್ಟು ಭ್ರಷ್ಟಾಚಾರವಾಗಿದೆ. ಮಲ್ಲಿಕಾರ್ಜುನ್ ಖರ್ಗೆ ಕೇಂದ್ರದ ಸಚಿವರಾಗಿದ್ದಾಗ ಅನೇಕ ವಿಷಯಗಳಲ್ಲಿ ಭ್ರಷ್ಟಾಚಾರವಾಗಿದೆ. ಅವರಿಗೆ ನಾಚಿಕೆ, ಮಾನ, ಮರ್ಯಾದೆ ಇದ್ದಿದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಾರದು ಎಂದು ವಾಗ್ದಾಳಿ ನಡೆಸಿದರು. ಹೊಸ ಸಂಸತ್ ನಿರ್ಮಾಣ ವಿಚಾರವಾಗಿ ಮಾತನಾಡಿದ ಅವರು, ಮುಂದಿನ ನೂರು ವರ್ಷಕ್ಕೆ ಸಂಸತ್ ಯಾವ ರೀತಿ ಇರಬೇಕು ಎಂಬ ಚಿಂತನೆಯಲ್ಲಿ ಸಂಸತ್ ನಿರ್ಮಾಣ ಮಾಡಲಾಗಿದೆ. ಜಗತ್ತಿನಲ್ಲೇ ಈ ರೀತಿಯ ಕಟ್ಟಡ ಎಲ್ಲಿಯೂ ನಿರ್ಮಾಣ ಮಾಡಿಲ್ಲ. ಜಗತ್ತಿಗೆ ಒಂದು ಉತ್ತಮ ನಿದರ್ಶನ ಈ ಸಂಸತ್ ಆಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ನಾಯಕರ ಮನೆ ಮುಂದೆ ಧ್ವಜಾರೋಹಣ