Publish Date: Sat, 13 Aug 2022 (20:17 IST)
Updated Date: Sat, 13 Aug 2022 (22:44 IST)
ಗಂಡನಿಂದ ವಂಚನೆ, ಹಲ್ಲೆಯಾಗಿರುವ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬಿಬಿಎಂಪಿಯ ಮಾಜಿ ಉಪ ಮೇಯರ್ ಬೆದರಿಕೆ ಹಾಕಿದ್ದಾರೆ. ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತಿಯ ವಿರುದ್ಧ ದೂರು ಸಲ್ಲಿಸಲಾಗಿದೆ. ಮಾಜಿ ಉಪಮೇಯರ್ ಶಹತಾಜ್ ಖಾನಂ ಅವರು ಫೇಸ್ಬುಕ್ ವಿಡಿಯೋ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ತಲಾಕ್ ನೀಡಿದ್ದಾಗಿ ಹೇಳಿ ಜೊತೆಗಿರಲು, ಸಂಸಾರ ಮಾಡಲು ಪತಿ ನಿರಾಕಾರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಪತಿ ಅನ್ವರ್, 2011ರಲ್ಲಿ ತಲಾಕ್ ನೀಡಿದ್ದರು. ಆದರೆ ಪತ್ನಿ ಮಾಜಿ ಉಪಮೇಯರ್ ಶಹತಾಜ್ ಆ ತಲಾಕ್ ಪ್ರಶ್ನಿಸಿ ಕೊರ್ಟ್ ಮೊರೆ ಹೊಗಿದ್ದರು. ಇತ್ತೀಚೆಗೆ ತಲಾಕ್ ವಿರುದ್ಧ ಕೋರ್ಟ್ನಲ್ಲಿ ಶಹತಾಜ್ ಗೆದ್ದಿದ್ದರು. ಬಳಿಕ ಮೇಡಳ್ಳಿಯ ಗಂಡನ ಮನೆಗೆ ತೆರಳಿದ್ದರು. ಈ ವೇಳೆ ಪೊಲೀಸರು ತನಗೆ ಸಹಾಯ ಮಾಡೋದಾಗಿ ಹೇಳಿ ನಂತರ ದಬ್ಬಾಳಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ..ಕೆ.ಆರ್.ಪುರಂ ಇನ್ಸ್ಪೆಕ್ಟರ್, ಮಹಿಳಾ ಸಬ್ ಇನ್ಸ್ಪೆಕ್ಟರ್ ವಿರುದ್ಧ ಈ ಆರೋಪ ಕೇಳಿಬಂದಿದೆ. 15 ನಿಮಿಷದ ಫೇಸ್ಬುಕ್ ಲೈವ್ ವಿಡಿಯೋ ಆರೋಪದಲ್ಲಿ ತನಗಾದ ಅನ್ಯಾಯದ ವಿರುದ್ಧ ನ್ಯಾಯ ನೀಡುವಂತೆ ಮಾಜಿ ಉಪ ಮೇಯರ್ ಶಹತಾಜ್ ಕೋರಿದ್ದಾರೆ.