Select Your Language

Notifications

webdunia
webdunia
webdunia
webdunia

ಪಾಲಿಕೆ ಚುನಾವಣೆಗೆ ಸಿದ್ಧತೆ..!

Preparation for corporation elections
bangalore , ಭಾನುವಾರ, 7 ಆಗಸ್ಟ್ 2022 (18:19 IST)
ಇಂದಿನಿಂದ ಪ್ರತಿ ಕ್ಷೇತ್ರದಲ್ಲೂ ಡಿಕೆಶಿ ಸಭೆ ಆಯೋಜನೆ ಮಾಡ್ತಿದ್ದಾರೆ.ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಕೋಣನಕುಂಟೆಯಲ್ಲಿ  ಸಭೆ ಆಯೋಜನೆ ಮಾಡಿದ್ದಾರೆ.
 
ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿಆ.15ರಂದು ಹಮ್ಮಿಕೊಂಡಿರುವ 'ಸ್ವಾತಂತ್ರ್ಯ ನಡಿಗೆ'  ಯಶಸ್ವಿಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಲೀಮು ನೀಡಿದ್ದಾರೆ.ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿ ಪ್ರತ್ಯೇಕವಾಗಿ ಪೂರ್ವಸಿದ್ಧತಾ ಸಭೆ ವೀಕ್ಷಿಸುತ್ತಿದ್ದಾರೆ.ಈ ಮೂಲಕ  ಅ.15ರಂದು ಸ್ವಾತಂತ್ರ್ಯ ಉದ್ಯಾನವನದಿಂದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದವರೆಗೆ  ಸ್ವಾತಂತ್ರ್ಯ ನಡಿಗೆ ನಡೆಯಲಿದೆ.
 
ಇನ್ನು ಸ್ವಾತಂತ್ರ್ಯ ನಡಿಗೆಯಲ್ಲಿ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಪಕ್ಷದಿಂದ ಮತ್ತೊಂದು ಶಕ್ತಿ ಪ್ರದರ್ಶನ ನೀಡಲು ಸಿದ್ಧತೆ ನಡೆಸಲು ಸಜ್ಜಾಗಿದ್ದಾರೆ.ಆ.15ರಂದು ಮಧ್ಯಾಹ್ನ 1 ಕಿ.ಮೀ. ಉದ್ದದವರೆಗೆ ಬೃಹತ್‌ ಸ್ವಾತಂತ್ರ್ಯ ನಡಿಗೆ ನಡೆಯಲಿದೆ.ಜೊತೆಗೆ ಬೆಂಗಳೂರಿನ 28 ಕ್ಷೇತ್ರಗಳಿಂದ ಹೆಚ್ಚೆಚ್ಚು ಜನರನ್ನು ಸೇರಿಸುವ ಮೂಲಕ ಬೃಹತ್‌ ಶಕ್ತಿ ಪ್ರದರ್ಶನ ನೀಡುವ ಪ್ಲ್ಯಾನ್ ನಡೆಸಿದ್ದಾರೆ.ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಂಗಳೂರು ಭಾಗದಲ್ಲಿ ಬೃಹತ್ ಪಾದಯಾತ್ರೆ ನಡೆಯಲಿದೆ.ಇದು ಪಕ್ಷದ ವರ್ಚಸ್ಸು ವೃದ್ಧಿಸಲು ಅನುಕೂಲ ಮಾಡಿಕೊಡಲಿದೆ ಎಂದು ಕೈ ನಾಯಕರ ಅಭಿಪ್ರಾಯವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಚುನಾವಣೆಗಾಗಿ ಮೀಸಲಾತಿ ಗಲಾಟೆ - ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ