ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ನಡೆಯಲಿರುವ ಪ್ರತಿ ಮನೆಯಲ್ಲಿ ರಾಷ್ಟ್ರ ಧ್ವಜ  ಅಭಿಯಾನವನ್ನ ಪಾಲಿಕೆ ಕೈಗೊಂಡಿದೆ. 10 ಲಕ್ಷ ರಾಷ್ಟ್ರ ಧ್ವಜಗಳನ್ನು ನಾಗರಿಕರಿಗೆ ವಿತರಿಸಲು ಬಿಬಿಎಂಪಿ ಸಜ್ಜಾಗಿದೆ.
 
 			
 
 			
			                     
							
							
			        							
								
																	
	 
	 ನಗರದಲ್ಲಿ ಈಗಾಗಲೇ ರಾಷ್ಟ್ರಧ್ವಜ  ಹಂಚಿಕೆಯನ್ನು ಬಿಬಿಎಂಪಿಯ ಎಲ್ಲಾ ವಲಯದ ಜಂಟಿ ಆಯುಕ್ತರು  ಪ್ರಮುಖ ಜನನಿ ಬಿಡ ಪ್ರದೇಶಗಳಲ್ಲಿ ಧ್ವಜಗಳನ್ನ ವಿತರಿಸುತ್ತಿದ್ದು, ನಾಗರಿಕರು ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲದೇ ಸರಿಯಾಗಿರುವ ರಾಷ್ಟ್ರ ಧ್ವಜಗಳನ್ನು ಮಾರಟ ಮಾಡಲು  ಸೂಚನೆ ಕೂಡ ನೀಡಲಾಗಿದೆ
	 
	ಭಾರತದ ಧ್ವಜ ಸಂಹಿತೆಯ ಪ್ರಕಾರ, ಧ್ವಜದ ಆಕಾರ, ಧ್ವಜದಲ್ಲಿರುವ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವು ಸಮಾನ ಗಾತ್ರ  ಅಶೋಕ ಚಕ್ರ ಮಧ್ಯಭಾಗದಲ್ಲಿರದೇ ಇರುವುದು, ಸ್ವಿಚಿಂಗ್ ಸರಿಯಾಗಿ ಇಲ್ಲದಿರುವುದು ಇದ್ದಲ್ಲಿ ಅಂತಹ ರಾಷ್ಟ್ರ ಧ್ವಜಗಳನ್ನು ನಾಗರಿಕರಿಗೆ  ನೀಡದಿರಲು ಸ್ಪಷ್ಟ ಆದೇಶ ನೀಡಲಾಗಿದೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.