Select Your Language

Notifications

webdunia
webdunia
webdunia
webdunia

ಕ್ಯಾಮೆರಾ ಕಳ್ಳಾರಿದಾರೆ ಎಚ್ಚರಿಕೆ

ಕ್ಯಾಮೆರಾ ಕಳ್ಳಾರಿದಾರೆ ಎಚ್ಚರಿಕೆ
ಬೆಂಗಳೂರು , ಭಾನುವಾರ, 6 ಮಾರ್ಚ್ 2022 (15:35 IST)
ಬಾಡಿಗೆಗೆ ಕ್ಯಾಮೆರಾ ಪಡೆಯಲು ಬಂದು ವಂಚಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದಾರೆ. ಪುರುಷೋತ್ತಮ್ ಬಂಧಿತ ಆರೋಪಿಯಾಗಿದ್ದು, ಆರೋಪಿ ಪುರುಷೋತ್ತಮ್ ಫೆಬ್ರವರಿ 22ರಂದು ಚಂದ್ರಾಲೇಔಟ್​ನ ಇನ್ಫೆನೆಟ್ ವಿಂಗ್ ಫೋಟೋ ಸ್ಟುಡಿಯೋಗೆ ಬಂದಿದ್ದು, ಸೋನಿ ಎಸ್ 7 ಕ್ಯಾಮೆರಾ ಪಡೆದು ಕ್ಲಾರಿಟಿ ಪರಿಶೀಲಿಸುವುದಾಗಿ ಹೇಳಿದ್ದಾನೆ.
ಬಳಿಕ ಹೊರಗಡೆ ಫೋಟೋ ಕ್ಲಿಕ್ಕಿಸುವುದಾಗಿ ಹೇಳಿ ಕ್ಯಾಮರಾ ಸಮೇತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಸ್ಟುಡಿಯೋ ಮಾಲೀಕ ಚೇತನ್ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆರೋಪಿ ಬಳಿಯಿದ್ದ ₹3.65 ಲಕ್ಷ ಮೌಲ್ಯದ ವಿವಿಧ ಕ್ಯಾಮೆರಾಗಳನ್ನು ವಶಕ್ಕೆ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಂಜಾ ಮಾರಾಟ ಆರೋಪಿಗಳ ಬಂಧನ