Publish Date: Wed, 25 Jul 2018 (13:57 IST)
Updated Date: Wed, 25 Jul 2018 (14:01 IST)
ಅನ್ನ ಕೊಡುವ ಕಂಪನಿಯಲ್ಲೇ ನೌಕರನೋರ್ವ ಕಳ್ಳತನ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅದು ಹಾಡಹಗಲೇ ಕಚೇರಿಯಲ್ಲಿನ ವಸ್ತುಗಳು ಸೇರಿದಂತೆ ನಗದು ಕಳ್ಳತನ ಮಾಡಿಕೊಂಡು ಹೋದ ಘಟನೆ ವಿಕಾಸ ನಗರದಲ್ಲಿ ನಡೆದಿದೆ.
ಕಂಪನಿಯ ನೌಕರ ಆಕಾಶ್ ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಕಳ್ಳನ ಕೈ ಚಳಕ ಕಚೇರಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಚೇರಿಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಚೇರಿಗೆ ನುಗ್ಗಿದ ಆಕಾಶ್, ಕಚೇರಿಯಲ್ಲಿದ್ದ ಪ್ರಿಂಟರ್, 10 ಸಾವಿರ ನಗದು ಸೇರಿದಂತೆ ಇನ್ನಿತರ ವಸ್ತು ಗಳನ್ನ ಕದ್ದು ಪರಾರಿಯಾಗಿದ್ದಾನೆ.
ಬೆಳಿಗ್ಗೆ ಬಂದು ನೋಡಿದಾಗ ಕಂಪನಿಯಲ್ಲಿದ್ದ ವಸ್ತು ನಾಪತ್ತೆಯಾಗಿರುವುದು ಗೊತ್ತಾಗಿದೆ. ಬಳಿಕ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಂಪನಿ ಸಿಬ್ಬಂದಿ ಕನ್ನ ಹಾಕಿದ್ದು ಕಂಡು ಬಂದಿದೆ. ಈ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.