Publish Date: Sat, 21 Jul 2018 (18:14 IST)
Updated Date: Sat, 21 Jul 2018 (18:16 IST)
ಮೊಬೈಲ್ ಕಳ್ಳತನ ಮಾಡಲು ಯತ್ನಿಸಿದ ಆಸಾಮಿಗೆ ಸರಿಯಾಗಿ ಗೂಸಾ ನೀಡಿದ ಘಟನೆ ನಡೆದಿದೆ. ಮೊಬೈಲ್ ಕಳ್ಳ ಸಿಕ್ಕಿ ಬೀಳುತ್ತಿದ್ದಂತೆ ಸ್ಥಳದಲ್ಲಿದ್ದವರು ಕಳ್ಳನಿಗೆ ಧರ್ಮದೇಟು ನೀಡಿದರು.
ಮೊಬೈಲ್ ಕಳ್ಳನಿಗೆ ಸಾರ್ವಜನಿಕರಿಂದ ಗೂಸಾ ಬಿದ್ದಿದೆ. ದಾವಣಗೆರೆಯ ಪಿ.ಬಿ ರಸ್ತೆಯಲ್ಲಿ ಘಟನೆ ನಡೆದಿದೆ. ಮೊಬೈಲ್ ಕದ್ದು ಸಿಕ್ಕಿಬಿದ್ದು ಕಳ್ಳನಿಗೆ ಸಾರ್ವಜನಿಕರು ಥಳಿಸಿದ್ದಾರೆ.
ಮಾಲತೇಶ್ ನಾಯ್ಕ್ ಎಂಬ ಚೋರನಿಗೆ ಜನರು ಹಲ್ಲೆ ನಡೆಸಿದ್ದಾರೆ. ಶಿವಮೊಗ್ಗದ ಮಾಲತೇಶ್ ನಾಯ್ಕ್ ಮೊಬೈಲ್ ಕಳ್ಳತನಕ್ಕೆ ಯತ್ನಿಸಿದ್ದ, ಇದನ್ನರಿತ ಸಾರ್ವಜನಿಕರು ಆತನನ್ನ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಕೊನೆಗೆ ಧರ್ಮದೇಟು ನೀಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಕೆಟಿಜೆ ನಗರ ಪೊಲೀಸರಿಂದ ಪರಿಶೀಲನೆ ನಡೆದಿದೆ.