Webdunia - Bharat's app for daily news and videos

Install App

ನಿಶ್ಚಿತಾರ್ಥದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವಕ!

Webdunia
ಶನಿವಾರ, 14 ಮೇ 2022 (07:55 IST)
ಗದಗ : ನಿಶ್ಚಿತಾರ್ಥದ ದಿನದಂದೇ ವಿಷ ಸೇವಿಸಿ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗದಗ ಜಿಲ್ಲೆ ಗಜೇಂದ್ರಗಢ ತಾಲೂಕಿನ ರಾಜೂರು ಗ್ರಾಮದ ಕಳಕಪ್ಪ ಅಂಗಡಿ (29) ಆತ್ಮಹತ್ಯೆ ಮಾಡಿಕೊಂಡ ಯುವಕ.
 
ಮದುವೆ ಮಾಡಿಕೊಳ್ಳುವ ಹುಮ್ಮಸ್ಸಿನಲ್ಲಿದ್ದ ಕಳಕಪ್ಪ ಏಕಾಏಕಿ ಆತ್ಮ ಹತ್ಯೆ ನಿರ್ಧಾರ ಮಾಡಿದ್ದು ಕುಟುಂಬಸ್ಥರನ್ನ ದಿಗ್ಭ್ರಮೆಗೆ ತಳ್ಳಿದೆ. ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ.‌  ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾನಸಿಕವಾಗಿ ಮನ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದಷ್ಟೇ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
 
ನಿಶ್ಚಿತಾರ್ಥದ ಹಿಂದಿನ ದಿನ ಅಂದರೆ ಗುರುವಾರ, ಕಾರ್ಯಕ್ರಮದ ತಯಾರಿ ಮಾಡಿಕೊಂಡಿದ್ದ. ಸ್ವತಃ ಮಾರ್ಕೆಟ್ ಗೆ ಹೋಗಿ ತರಕಾರಿ, ದಿನಸಿ ಖರೀದಿಸಿದ್ದ ಕಳಕಪ್ಪ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.. 
ರಾತ್ರಿ ಕಟಿಂಗ್ ಶೇವಿಂಗ್ ಮಾಡಿಸಿಕೊಂಡು ಬೆಳಗಿನ ಕಾರ್ಯಕ್ರಮಕ್ಕೆ ರೆಡಿಯಾದಂತೆ ಕಂಡಿದ್ದ  ಕಳಕಪ್ಪ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಸಿದ್ಧನಾಗಿದ್ದ. ಬೆಳಗಿನ ಜಾವ ಗ್ರಾಮದ ಹೊರವಲಯದಲ್ಲಿರುವ ಯಜಮಾನರ ತೋಟದ ಮನೆಗೆ ತೆರಳಿ ವಿಷ ಸೇವಿಸಿದ್ದ. ಬೆಳಗ್ಗೆ ಮದುಮಗ ಎಲ್ಲಿ ಅಂತಾ ಹುಡುಕುವಾಗ ಆತ್ಮಹತ್ಯೆ ವಿಷಯ ಬೆಳಕಿಗೆ ಬಂದಿದೆ.
 
ರಾತ್ರಿ ಊಟ ಮಾಡಿ ಮನೆ ಎದುರಿನ ಮಸೀದಿ ಕಟ್ಟೆ ಮೇಲೆ ಮಲ್ಕೊಂಡಿದ್ದ. ಬೆಳಗ್ಗೆ ಹಾಸಿಗೆ ಮನೆಯಲ್ಲಿಟ್ಟು ತೋಟದ ಮನೆಗೆ ಹೋಗಿದ್ದ. ಅಲ್ಲಿಂದ ಕಳಕಪ್ಪ ಸಾವಿನ ಸುದ್ದಿ ಮನೆಗೆ ಬಂದಿದೆ.
ಗ್ರಾಮದಲ್ಲಿನ ಸ್ನೇಹಿತರಿಗೆ ಸಂಬಂಧಿಕರಿಗೆ ಕಳಕಪ್ಪ ಏನೂ ಹೇಳಿಕೊಂಡಿರಲಿಲ್ಲ. ಆರೋಗ್ಯ ಸರಿಯಾಗಿತ್ತು. ಮೂವರು ಸಹೋದರರಿದ್ದು ಕೌಟುಂಬಿಕ ಕಲಹ ಇಲ್ಲ‌.‌ ಮದ್ವೆಯಾಗೋ ಹುಡುಗಿಯ ಜೊತೆಗೂ ಚೆನ್ನಾಗಿದ್ದ. ಹಾಗಿದ್ದರೂ ಆತ್ಮಹತ್ಯೆ ಯಾಕೆ ಮಾಡಿಕೊಂಡ ಅನ್ನೋ ಪ್ರಶ್ನೆ ಸದ್ಯಕ್ಕೆ ಮೂಡಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

6 ತಿಂಗಳಿನಿಂದ ಅಪ್ಪ, ಅಮ್ಮನ ಭೇಟಿಯಾಗಿಲ್ಲ, ಶಿಕ್ಷೆ ಕಡಿಮೆಗಾಗಿ ಜಡ್ಜ್‌ ಮುಂದೆ ಪ್ರಜ್ವಲ್ ಕಣ್ಣೀರು

ಪ್ರತಿಭಟನೆ ಮಾಡಲಿರುವ ರಾಹುಲ್ ಗಾಂಧಿ ವಿರುದ್ಧವೇ ಬಿಜೆಪಿ ಪ್ರತಿಭಟನೆ

ಮುಂದಿನ ಸುದ್ದಿ
Show comments