Publish Date: Tue, 03 May 2022 (15:21 IST)
Updated Date: Tue, 03 May 2022 (15:57 IST)
ಹಾವೇರಿ : ಹಾವೇರಿ ತಾಲೂಕು ಗುತ್ತಲ ಸಮೀಪದ ಹೊಸಮೇಲ್ಮುರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತ ಯುವಕ ಹೊಸಮೇಲ್ಮುರಿಯ ಪಕ್ಕಿರೇಶ ಸುರೇಶ ಅರಳಿ (18) ಎಂದು ತಿಳಿದು ಬಂದಿದೆ. ನಿನ್ನೆ ಗುರುವಾರ ದಿವಸ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆ ಬರೆದು ಬಂದ ಮೇಲೆ,
ಸಂಜೆಯ ವೇಳೆ ಪಾಲಕರು ಪರೀಕ್ಷೆ ಇರುವ ಸಲುವಾಗಿ ಕಾಲ ಹರಣ ಮಾಡದೇ ಓದಲು ಬುದ್ಧಿವಾದ ಹೇಳಿದ್ದಕ್ಕೆ ಬೇಜಾರ್ ಮಾಡಿಕೊಂಡು ಅವರ ಹೊಲದಲ್ಲಿನ ರೇಷ್ಮೆ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೋಷಕರು ದೂರು ನೀಡಿದ್ದಾರೆ.