Publish Date: Wed, 06 Apr 2022 (07:04 IST)
Updated Date: Wed, 06 Apr 2022 (07:54 IST)
ಹಾವೇರಿ : ಬಿರುಗಾಳಿ ಸಮೇತ ಸುರಿದ ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು,
ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ಕುಂಬಾರಗೇರಿ ಓಣಿಯಲ್ಲಿ ನಡೆದಿದೆ.
ಮಮ್ತಾಜ್ ಬಾಲೇಬಾಯಿ (42) ಮೃತ ಮಹಿಳೆ. ಏಳು ಗಂಟೆ ಸುಮಾರಿಗೆ ಗುಡುಗು, ಸಿಡಿಲು ಮತ್ತು ಭಾರಿ ಗಾಳಿಯೊಂದಿಗೆ ಮಳೆ ಸುರಿದ ಈ ದುರ್ಘಟನೆ ಸಂಭವಿಸಿದೆ.
ಮನೆಯ ಮೇಲ್ಛಾವಣಿಯ ಮೇಲಿನ ಸಿಮೆಂಟ್ ಇಟ್ಟಿಗೆ ಮಹಿಳೆ ತಲೆ ಮೇಲೆ ಬಿದ್ದಿದ್ದರಿಂದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಹಾವೇರಿ ನಗರ, ಸೇರಿದಂತೆ ಹಾವೇರಿ ತಾಲ್ಲೂಕಿನಲ್ಲಿ ಬಿರುಗಾಳಿ ಸಮೇತ ಮಳೆಗೆ ವಿದ್ಯುತ್ ಸಂಪರ್ಕ ವನ್ನ ಕಡಿತ ಮಾಡಲಾಗಿದೆ.