Select Your Language

Notifications

webdunia
webdunia
webdunia
webdunia

ಅಭ್ಯರ್ಥಿ ಸಹೋದರ ಆತ್ಮಹತ್ಯೆ

Candidate brother committed suicide
bangalore , ಬುಧವಾರ, 11 ಮೇ 2022 (19:38 IST)
ರಾಜ್ಯದಲ್ಲಿ ಪಿಎಸ್‌ಐ ವಿವಾದ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಈ ಬೆನ್ನಲ್ಲೇ ಪಿಎಸ್‌ಐ ಹುದ್ದೆಗೆ ಆಯ್ಕೆಯಾಗಿದ್ದಂತ ಅಭ್ಯರ್ಥಿಯ ಅಣ್ಣ, ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಹಾಸನದ ಗುಂಜಾವ್​​​​​ನಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಗುಂಜಾವ್​​​ನ ಮನುಕುಮಾರ್ ಎಂಬಾತ ಇತ್ತೀಚೆಗೆ ನಡೆದಿದ್ದ 545 ಪಿಎಸ್‌ಐ ನೇಮಕಾತಿಯಲ್ಲಿ 50ನೇ ಱಂಕ್​ ಪಡೆಯುವುದರೊಂದಿಗೆ ಆಯ್ಕೆಯಾಗಿದ್ದನು. ಈ ನಡುವೆ ಪಿಎಸ್‌ಐ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ದಿನ ದಿನಕ್ಕೂ ಹಲವು ಅಭ್ಯರ್ಥಿಗಳು, ಕಿಂಗ್ ಪಿನ್​​​​ಗಳನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಪಿಎಸ್‌ಐ ಪರೀಕ್ಷೆಯಲ್ಲಿ 50ನೇ ಱಂಕ್ ಪಡೆದು ಆಯ್ಕೆಯಾಗಿದ್ದ ಅಭ್ಯರ್ಥಿ ಮನುಕುಮಾರ್ ಎಂಬುವರ ಅಣ್ಣ ವಾಸು ಎಂಬಾತ ಇಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋದಾಗಿ ತಿಳಿದು ಬಂದಿದೆ. ಇದೀಗ ಅಭ್ಯರ್ಥಿ ಅಣ್ಣನ ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟುಹಾಕುವಂತೆ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಯಿಂದ ಎರಡು ಭಾರತ ನಿರ್ಮಾಣ