Publish Date: Tue, 03 May 2022 (20:04 IST)
Updated Date: Tue, 03 May 2022 (20:06 IST)
ಮೊಬೈಲ್ ನೋಡದಂತೆ ಬುದ್ದಿವಾದ ಹೇಳಿದ್ದಕ್ಕೆ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರವಾರ ನಗರದ ಹಬ್ಬುವಾಡದಲ್ಲಿ ನಡೆದಿದೆ. 20 ವರ್ಷದ ಮೇಘ ಆತ್ಮಹತ್ಯೆಗೆ ಶರಣಾದ ಯುವತಿ. ಮೂಲತಃ ಸಿದ್ದಾಪುರ ತಾಲೂಕಿನವಳಾದ ಮೇಘ ಪ್ಯಾರಾಮೆಡಿಕಲ್ ಓದಿಕೊಂಡಿದ್ದಳು. ಹಬ್ಬುವಾಡದಲ್ಲಿ ಬಾಡಿಗೆ ಮನೆಯಲ್ಲಿ ಯುವತಿ ಸೇರಿದಂತೆ ಅವಳ ಪೋಷಕರು ವಾಸವಾಗಿದ್ದರು. ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ