Publish Date: Sun, 20 Oct 2019 (18:04 IST)
Updated Date: Sun, 20 Oct 2019 (18:07 IST)
ಪತ್ನಿಯೊಬ್ಬಳ ಅಕ್ರಮ ಹಾಗೂ ಅನೈತಿಕ ಸಂಬಂಧಕ್ಕೆ ಗಂಡ ಕೊಲೆಗೀಡಾಗಿದ್ದಾನೆ.
ಪರಪುರುಷನ ತೆಕ್ಕೆಗೆ ಜಾರಿದ್ದ ಪತ್ನಿಯೊಬ್ಬಳು ತನ್ನ ಲವರ್ ಜೊತೆ ಸೇರಿ ಗಂಡನ ಕಥೆ ಫಿನಿಷ್ ಮಾಡಿದ್ದಾಳೆ.
ಯಾರಿಗೂ ತನ್ನ ಕಾಮಕಾಂಡ ಹಾಗೂ ಅಪರಾಧ ಕೃತ್ಯ ಗೊತ್ತಾಗದಂತೆ ಪತಿಯ ಶವವನ್ನು ಕಾಲೇಜೊಂದರ ಮುಂಭಾಗದಲ್ಲಿ ಎಸೆದು ಹೋಗಿದ್ದರು.
ಗಂಡನಿಗೆ ಕಾಣೆಯಾಗಿದ್ದು ಆ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಅಂತ ಪತ್ನಿ ಯಶೋಧಾ ತಿಳಿಸಿದ್ದಳು. ಆದರೆ ಕೊಲೆಯಾದ ಗಂಡ ಗೋಪಾಲನ ಸಂಬಂಧಿಕರು ಮಾತ್ರ ಕೊಲೆ ಪ್ರಕರಣ ದಾಖಲು ಮಾಡಿದ್ರು.
ತನಿಖೆ ಕೈಗೊಂಡ ಪೊಲೀಸರು ಗಂಡ ಗೋಪಾಲನನ್ನು ಕೊಲೆ ಮಾಡಿರೋ ಯಶೋಧಾಳನ್ನು ಬಂಧನ ಮಾಡಿದ್ದಾರೆ.
ಯಶೋಧಾಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ತಿಪ್ಪೇಶ ಹಾಗೂ ಕೊಲೆಗೆ ಸಹಕರಿಸಿದ ಹುಲಿಕುಂಟ ಪರಾರಿಯಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕನಕಯ್ಯನಹಟ್ಟಿಯಲ್ಲಿ ಈ ಘಟನೆ ನಡೆದಿದೆ.