Select Your Language

Notifications

webdunia
webdunia
webdunia
webdunia

ರಾಸಲೀಲೆ ವಿಡಿಯೋ ಹರಿಬಿಟ್ಟಿದ್ದಕ್ಕೆ ಪತ್ನಿಯ ಪ್ರಿಯಕರನ, ತಂದೆಯ ಕೊಲೆ

ರಾಸಲೀಲೆ ವಿಡಿಯೋ ಹರಿಬಿಟ್ಟಿದ್ದಕ್ಕೆ ಪತ್ನಿಯ ಪ್ರಿಯಕರನ, ತಂದೆಯ ಕೊಲೆ
ಹಾಸನ , ಮಂಗಳವಾರ, 15 ಅಕ್ಟೋಬರ್ 2019 (18:42 IST)
ಅಕ್ರಮ ಸಂಬಂಧದ ವಿಡಿಯೋ  ಹರಿಬಿಟ್ಟ ಕಾರಣಕ್ಕೆ ತಂದೆ, ಮಗನ ಜೋಡಿ ಕೊಲೆ ನಡೆದಿದೆ.

ತನ್ನ ಪತ್ನಿಯೊಂದಿಗೆ ಮಂಜುನಾಥ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಸುದ್ದಿ ಕೇಳಿಬಂದ ನಡುವೆಯೇ ಅವರಿಬ್ಬರ ಕಾಮದಾಟದ ವಿಡಿಯೋ ವೈರಲ್ ಆಗಿರೋ ಸುದ್ದಿ ಕೇಳಿ ಗಂಡ ಗರಂ ಆಗಿದ್ದಾನೆ.

ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಂಜುನಾಥ್ ಹಾಗೂ ಜಗಳ ಬಿಡಿಸಲು ಬಂದ ಮಂಜುನಾಥ್ ನ ತಂದೆಯನ್ನು ಹೊಡೆದು ಕೊಲೆ ಮಾಡಲಾಗಿದೆ.

ಕೃಷ್ಣಪ್ಪ ಹಾಗೂ ಆತನ ಸಂಬಂಧಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೃಷ್ಣಪ್ಪನ ಪತ್ನಿ ಜೊತೆಗೆ ಮಂಜುನಾಥ್ ಅನೈತಿಕ ಸಂಬಂಧ ಹೊಂದಿದ್ದನು. ಅಷ್ಟೇ ಅಲ್ಲ ಪಲ್ಲಂಗದಾಟದ ವಿಡಿಯೋ ಹರಿಬಿಟ್ಟಿದ್ದ ಎನ್ನಲಾಗಿದೆ.

ಈ ಘಟನೆ ಹಾಸನದ ಗುಡ್ಡದ ಕೆಂಗನಳ್ಳಿಯಲ್ಲಿ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅನರ್ಹ ಶಾಸಕರಿಗೆ ಪೆಟ್ಟು ಕೊಡಲು ಮುಂದಾದ ಜೆಡಿಎಸ್