Publish Date: Tue, 15 Oct 2019 (08:21 IST)
Updated Date: Tue, 15 Oct 2019 (08:24 IST)
ರಾಮನಗರ : ಪ್ರಿಯಕರನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಘಟನೆ ರಾಮನಗರದ ಗೌಸಿಯಾನಗರದಲ್ಲಿ ನಡೆದಿದೆ.
ಸಾಧಿಕ್ ಪಾಷ(32) ಕೊಲೆಯಾದ ಪತಿ, ಪತ್ನಿ ಅಸ್ಮಾ ಬಾನು(27), ಮಹಮ್ಮದ್ ರಂಜಾನ್ (20) ಕೊಲೆ ಮಾಡಿದ ಆರೋಪಿಗಳು. ಈ ಮೂವರು ಒಟ್ಟಿಗೆ ಕೆಲಸಮಾಡುತ್ತಿದ್ದು, ಆ ವೇಳೆ ಅಸ್ಮಾ ಹಾಗೂ ರಂಜಾನ್ ಮಧ್ಯ ಪ್ರೀತಿಯಾಗಿದೆ. ಇವರಿಬ್ಬರು ಪತಿ ಇಲ್ಲದ ವೇಳೆ ಅನೈತಿಕ ಸಂಬಂಧ ಬೆಳೆಸುತ್ತಿದ್ದರು.
ಈ ವಿಚಾರ ತಿಳಿದ ಪತಿ, ಪತ್ನಿಯ ಜೊತೆ ಜಗಳವಾಡಿದ್ದಕ್ಕೆ ಕೋಪಗೊಂಡ ಪತ್ನಿ ಹಾಗೂ ಪ್ರಿಯಕರ ಇಬ್ಬರು ಸೇರಿ ಸಾಧಿಕ್ ನನ್ನು ಹೊಡೆದು ಉಸಿರುಗಟ್ಟಿಸಿ ಸಾಯಿಸಿದ್ದಾರೆ. ಬಳಿಕ ಪತಿ ಮೃತಪಟ್ಟ ಬಗ್ಗೆ ಪತ್ನಿ ಅಸ್ಮಾ ಪೊಲೀಸರಿಗೆ ದೂರು ನೀಡಿದ್ದಾಳೆ.
ಪೊಲೀಸರು ಪರಿಶೀಲನೆ ನಡೆಸುವಾಗ ಮೃತನ ದೇಹದಲ್ಲಿರುವ ಗಾಯಗಳನ್ನು ಕಂಡು ಅನುಮಾನಗೊಂಡು ಪತ್ನಿಯನ್ನು ವಿಚಾರಣೆ ನಡೆಸಿದಾಗ ಆಕೆ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.