Select Your Language

Notifications

webdunia
webdunia
webdunia
webdunia

ಪ್ರಿಯಕರನ ನೆರವಿನಿಂದ ಪತಿಯನ್ನು ಹತ್ಯೆಗೈದ ಪತ್ನಿ

lover
bangalore , ಬುಧವಾರ, 8 ನವೆಂಬರ್ 2023 (18:00 IST)
ಪತಿಯನ್ನು ಕೊಂದು ಅವನು ಹೃದಯಾಘಾತದಿಂದ ಸತ್ತಿದ್ದಾನೆಂದು ಹೇಳಿ ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದ ಮಹಿಳೆ ಮತ್ತು ಅವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 28 ವರ್ಷದ ಹಂಸರೇಖಾ 38 ವರ್ಷದ ಆರ್ಮುಗಂ ಜೊತೆ ಸೇರಿ ಪತಿ ಸತ್ಯನಾರಾಯಣ ಎಂಬವರನ್ನು ಕೊಲ್ಲುವ ಸಂಚು ರೂಪಿಸಿದರು. ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಅವಳಿಗೆ ಸತತವಾಗಿ ಚಿತ್ರಹಿಂಸೆಯನ್ನು ನೀಡುತ್ತಿದ್ದ.
 
 ಇದಲ್ಲದೇ ಪ್ರತಿದಿನ ಕುಡಿದ ಮತ್ತಿನಲ್ಲಿ ಗಲಾಟೆ ಮಾಡುತ್ತಿದ್ದರಿಂದ ರೇಖಾ ಬೇಸರಗೊಂಡಿದ್ದಳು. 6 ತಿಂಗಳ ಹಿಂದೆ ರೇಖಾ ಆರ್ಮುಗಂ ಸ್ನೇಹ ಮಾಡಿದಾಗ ಪತಿ ನಡವಳಿಕೆ ಕುರಿತು ಅವಳು ಹೇಳಿದಳು. ಅವರಿಬ್ಬರ ನಡುವೆ ಅನೈತಿಕ ಸಂಬಂಧ ಹುಟ್ಟಿಕೊಂಡಿತು. ಈ ಬಗ್ಗೆ ಪತಿಗೆ ಸುಳಿವು ಸಿಕ್ಕಿ ಪತ್ನಿ ಜೊತೆ ಜಗಳವಾಡುತ್ತಿದ್ದ. ಕಳೆದ ಸೋಮವಾರ ಕುಡಿದ ಮತ್ತಿನಲ್ಲಿ ಪತಿ ಹೊಡೆದಾಗ ಆರ್ಮುಗಂಗೆ ಅವಳು ಕರೆ ಮಾಡಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದರು.
 
ಆರ್ಮುಗಂ ಅವನ ಕುತ್ತಿಗೆ ಅಮುಕಿದಾಗ ರೇಖಾ ಅವನನ್ನು ನೆಲಕ್ಕೆ ಬೀಳಿಸಿದ್ದಳು. ಪತಿ ಮೃತಪಟ್ಟ ಮೇಲೆ ಹೃದಯಾಘಾತದಿಂದ ಸತ್ತಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು. ಪತಿಯ ಸೋದರಿ ಅಂಜಲಿ ತನ್ನ ಸೋದರನ ಕುತ್ತಿಗೆಯಲ್ಲಿ ಉಗುರಿನ ಗುರುತುಗಳಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಮತ್ತಷ್ಟು ತನಿಖೆಗೆ ಒಳಪಡಿಸಿದಾಗ ರೇಖಾ ತಪ್ಪೊಪ್ಪಿಕೊಂಡಳು.

Share this Story:

Follow Webdunia kannada

ಮುಂದಿನ ಸುದ್ದಿ

2028ರ ಚುನಾವಣೆಗೆ ಸಿಎಂ ಸ್ಥಾನ ಕೇಳುವೆ-ಸತೀಶ್‌ ಜಾರಕಿಹೊಳಿ