Select Your Language

Notifications

webdunia
webdunia
webdunia
webdunia

ಜಾತ್ರೆಗೆ ಮನೆ ಮಂದಿ ಹೋದಾಗ ಅಪ್ಪನನ್ನೇ ಕೊಂದ ಮಗ

ಜಾತ್ರೆಗೆ ಮನೆ ಮಂದಿ ಹೋದಾಗ ಅಪ್ಪನನ್ನೇ ಕೊಂದ ಮಗ
ವಿಜಯಪುರ , ಗುರುವಾರ, 3 ಅಕ್ಟೋಬರ್ 2019 (12:52 IST)
ಆ ಮನೆಯ ಮಂದಿ ತಮ್ಮ ಊರಿನ ಜಾತ್ರೆಗೆ ಅಂತ ಹೋಗಿದ್ರು. ಮನೆಯಲ್ಲಿ ಅಪ್ಪ – ಮಗ ಇದ್ರು. ಆದರೆ ಜಾತ್ರೆ ಮುಗಿಸಿ ಬರೋದ್ರೊಳಗಾಗಿ ಮನೆಯ ಹಿರಿಯ ಜೀವವಾಗಿದ್ದ ಅಪ್ಪನ ಹೆಣವನ್ನೇ ಮಗ ಉರುಳಿಸಿದ್ದನು.

ಕುಡಿತದ ದಾಸನಾಗಿದ್ದ ಪುತ್ರನೊಬ್ಬನು ತನ್ನ ಹೆತ್ತ ತಂದೆಯನ್ನೇ ಭೀಕರವಾಗಿ ಕೊಲೆ ಮಾಡಿ ಪೊಲೀಸರ ಅತಿಥಿಯಾಗಿರೋ ಘಟನೆ ನಡೆದಿದೆ.

ವಿಪರೀತವಾಗಿ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ ಸಂಜೀವ್ ತೊರವಿ ಎಂಬಾತ ತನ್ನ ಅಪ್ಪನಾದ ಅಣ್ಣಪ್ಪ (59) ನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ವಿಜಯಪುರ ಜಿಲ್ಲೆಯ ಟಾಕಳಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕುಡಿತಕ್ಕೆ ಹಣ ಪಡೆದು ತೂರಾಡುತ್ತಾ ಬಂದಿದ್ದ ಮಗ ಮತ್ತೆ ಹಣ ಕೊಡುವಂತೆ ಅಪ್ಪನಿಗೆ ದುಂಬಾಲು ಬಿದ್ದಿದ್ದಾನೆ. ಆದರೆ ಹಣ ಕೊಡದ ಅಪ್ಪನನ್ನೇ ಕೊಲೆ ಮಾಡಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಮೂರು ದಿನಗಳ ಕಾಲ ನೆರೆಪೀಡಿತ ಪ್ರದೇಶಗಳ ಪ್ರವಾಸ ಕೈಗೊಂಡ ಸಿಎಂ ಯಡಿಯೂರಪ್ಪ