Publish Date: Sat, 14 Sep 2019 (16:04 IST)
Updated Date: Sat, 14 Sep 2019 (16:05 IST)
ಕುಡಿತದ ಮತ್ತಿನಲ್ಲಿದ್ದ ಯುವಕನೋರ್ವ ಮಾಡಬಾರದ ಕೆಲಸ ಮಾಡಿಕೊಂಡಿದ್ದಾನೆ.
ನಶೆಯಲ್ಲಿದ್ದ ಯುವಕನೊಬ್ಬ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವಿಗೀಡಾಗಿರುವಂತಹ ಘಟನೆ ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಜುನಾಥ ನಗರದಲ್ಲಿ ನಡೆದಿದೆ.
ನೇಪಾಳ ಮೂಲದ ತತ್ವ ಸೂರಜ್ (24) ಮೃತ ದುರ್ದೈವಿಯಾಗಿದ್ದು, ಕೆಲವು ತಿಂಗಳುಗಳ ಹಿಂದೆ ಕೆಲಸವನ್ನು ಅರಿಸಿ ನೇಪಾಳದಿಂದ ಜಿಗಣಿಗೆ ಬಂದು ಬಾಲರೆಡ್ಡಿ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ವಾಸವಿದ್ದ.
ಇನ್ನು ಮೃತ ತತ್ವ ಸೂರಜ್ ವೃತ್ತಿಯಲ್ಲಿ ಆಡುಗೆ ಭಟ್ಟನಾಗಿದ್ದು, ಜಿಗಣಿ ಸಮೀಪದ ಕರಾವಳಿ ಹೋಟೆಲ್ ನಲ್ಲಿ ಕಳೆದ ಒಂದು ವಾರದಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ. ಆದ್ರೆ ರಾತ್ರಿ ತಾನು ವಾಸವಿದ್ದ ರೂಮ್ ನಲ್ಲಿ ಕಂಠ ಪೂರ್ತಿ ಕುಡಿದು ಇಡೀ ಬಡಾವಣೆಯಲ್ಲಿ ರಂಪಾಟ ಮಾಡಿ ತಾನು ವಾಸವಿದ್ದ ಮೂರು ಅಂತಸ್ತಿನ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ.