ಕಿಸ್ ಕೊಡದ ಗೆಳೆತಿಗೆ ಆತ ಮಾಡಿದ್ದೇನು? ಶಾಕಿಂಗ್

ಸೋಮವಾರ, 9 ಸೆಪ್ಟಂಬರ್ 2019 (16:57 IST)
ಮುತ್ತು ಕೊಡಲು ನಿರಾಕರಿಸಿದ ಗೆಳತಿಯನ್ನು ಗೆಳೆಯನೊಬ್ಬ ಕೊಂದಿದ್ದಾನೆ.

ಕಾಲೇಜ್ ಮುಗಿದ ನಂತರ ಗೆಳೆಯ ಹಾಗೂ ಗೆಳತಿ ಇಬ್ಬರೂ ಕಾಡಿಗೆ ಹೋಗಿದ್ದಾರೆ. ಅಲ್ಲಿ ಏಕಾಂತದಲ್ಲಿದ್ದಾಗ ಗೆಳೆಯನಿಗೆ ಮೂಡ್ ಬಂದಿದೆ. ಆಗ ಗೆಳತಿಗೆ ಕಿಸ್ ಮಾಡೋಕೆ ಮುಂದಾಗಿದ್ದಾನೆ. ಆದರೆ ಮುತ್ತು ಕೊಡಲು ಹಾಗೂ ಪಡೆಯಲು ಗೆಳತಿ ನಿರಾಕರಿಸಿದ್ದಾಳೆ.

ಗೆಳತಿಯ ನಡೆಯಿಂದ ರೋಸಿಹೋದ ಗೆಳೆಯ, ತನ್ನ 17 ವರ್ಷದ ಗೆಳತಿಯನ್ನೇ ಕೊಂದಿದ್ದಾನೆ.

ಸಿಟ್ಟಿಗೆದ್ದು ಯುವಕ ತಳ್ಳಿದ ರಭಸಕ್ಕೆ ಯುವತಿ ತಲೆ ಬಂಡೆಗೆ ಢಿಕ್ಕಿ ಹೊಡೆದು ಅಸುನೀಗಿದ್ದಾಳೆ. ಮಧ್ಯಪ್ರದೇಶದ ಬಿಜಾಪುರಿ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿ ರಮಣ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ HDK ಕೊಟ್ಟ 1 ಕೋಟಿ ಅನುದಾನ ವಾಪಸ್ ಪಡೆದ ಯಡಿಯೂರಪ್ಪ