HDK ಕೊಟ್ಟ 1 ಕೋಟಿ ಅನುದಾನ ವಾಪಸ್ ಪಡೆದ ಯಡಿಯೂರಪ್ಪ

ಸೋಮವಾರ, 9 ಸೆಪ್ಟಂಬರ್ 2019 (16:44 IST)
ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮಠಕ್ಕೆ ನೀಡಿದ್ದ 1 ಕೋಟಿ ರೂ. ಅನುದಾನವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವಾಪಸ್ ಪಡೆದುಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ನ ಖಾಸಾ ಮಠಕ್ಕೆ ನೀಡಲಾಗಿತ್ತು 1 ಕೋಟಿ ರೂ. ಅನುದಾನ.

ಈಗ ಅದನ್ನು ವಾಪಸ್ ಪಡೆದಿದ್ದಾರೆ ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿ ಎಂ ಬಿ.ಎಸ್. ಯಡಿಯೂರಪ್ಪರ ನಿರ್ಧಾರಕ್ಕೆ ಭಕ್ತರಿಂದ ಅಕ್ರೋಶ ಕೇಳಿಬಂದಿದೆ. ಕುಮಾರಸ್ವಾಮಿ, ಚಂಡರಕಿ ಗ್ರಾಮಕ್ಕೆ ಗ್ರಾಮ ವಾಸ್ತವ್ಯ ಮಾಡಲು ಬಂದಾಗ  ಶ್ರೀಮಠಕ್ಕೆ ಭೇಟಿ ನೀಡಿದ್ರು. ಆಗ ಒಂದು ಕೋಟಿ ಅನುದಾನ ನೀಡುವ ಭರವಸೆ ನೀಡಿದ್ರು.

HKRDB ಮುಖ್ಯಮಂತ್ರಿ ವಿವೇಚನಾ ಕೋಟಾ ಬಳಸಿ ಸಮಾಜಿಕ ಕಾರ್ಯಕ್ರಮ ಮತ್ತು ಸಮಾಜಿಕೇತರ ಕಾರ್ಯಕ್ರಮದಡಿ ಅನುದಾನ ನೀಡಿದರು.

ಈಗ ಅನುದಾನದ ಹಣಕ್ಕೆ ಬಿಜೆಪಿ ಸರಕಾರ ಕತ್ತರಿ ಹಾಕಿದಕ್ಕೆ ಆಕ್ರೋಶ ಕೇಳಿಬರುತ್ತಿದೆ.

ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಅವರ ಮೇಲಿನ ದ್ವೇಷಕ್ಕೆ ಮಠಕ್ಕೆ ನೀಡಿದ್ದ ಅನುದಾನ ಕಡಿತ ಮಾಡಿದ್ರಾ ಸಿಎಂ ಯಡಿಯೂರಪ್ಪ ಅನ್ನೋ ಚರ್ಚೆ ಶುರುವಾಗಿದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಂಡ್ಯದಲ್ಲಿ ಮತ್ತೆ ಶುರುವಾಯ್ತು ಅಂಥ ಕೆಲಸ