Select Your Language

Notifications

webdunia
webdunia
webdunia
webdunia

ಕುಡಿತಕ್ಕೆ ಚಿನ್ನಾಭರಣ ಕೊಡದ ತಂಗಿಯನ್ನೇ ಕೊಲ್ಲೋದಾ?

ಕುಡಿತಕ್ಕೆ ಚಿನ್ನಾಭರಣ ಕೊಡದ ತಂಗಿಯನ್ನೇ ಕೊಲ್ಲೋದಾ?
ಹೈದರಾಬಾದ್ , ಶನಿವಾರ, 10 ಆಗಸ್ಟ್ 2019 (18:55 IST)
ಕುಡಿತದ ದಾಸನಾಗಿದ್ದ ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನೇ ಕೊಂದು, ಆತ್ಮಹತ್ಯೆ ಅಂತ ಬಿಂಬಿಸೋಕೆ ಹೋಗಿ ಕಂಬಿ ಎಣಿಸುವಂತಾಗಿದೆ.

ಕುಡಿತದ ದಾಸನಾಗಿದ್ದ ರಮಣ (35) ಎಂಬಾತ ತಮ್ಮ ಸಹೋದರಿಯನ್ನೇ ಚಿನ್ನಾಭರಣ ಕೊಡಲಿಲ್ಲ ಅಂತ ಕೊಲೆ ಮಾಡಿದ್ದಾನೆ.
ಸೀತಾಲಕ್ಷ್ಮೀ (40) ಕೊಲೆಯಾದವರು. ತೆಲಂಗಾಣ ಪ್ರದೇಶದ ಚಂದನಗರದಲ್ಲಿ ಈ ಘಟನೆ ನಡೆದಿದೆ.

ಕೊಲೆಯಾಗಿರೋ ಮಹಿಳೆಯ ಚಿಕ್ಕಪ್ಪನ ಮಗನಾಗಿರೋ ರಮಣ ಎಂಬಾತ ಕುಡಿತದ ದಾಸನಾಗಿದ್ದನು. ಒಂಟಿಯಾಗಿದ್ದ ಸೀತಾಲಕ್ಷ್ಮೀ ಬಳಿ ಹಣ ಕೇಳಿದ್ದಾನೆ. ಆ ಬಳಿಕ ಚಿನ್ನದ ಆಭರಣಗಳನ್ನು ಕೇಳಿದ್ದಾನೆ. ಅವಳು ಕೊಡೋದಕ್ಕೆ ನಿರಾಕರಿಸಿದ್ದಕ್ಕೆ ಅವಳನ್ನು ಕೊಲೆ ಮಾಡಿ ನೇಣು ಹಾಕಿ ಆತ್ಮಹತ್ಯೆ ಅಂತ ಬಿಂಬಿಸೋಕೆ ಹೋಗಿದ್ದ.

ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಆರೋಪಿಯನ್ನ ಪೊಲೀಸರು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಸಿ.ಪಾಟೀಲ್ ಬಿಜೆಪಿ ಸೇರ್ಪಡೆಯಾಗಲ್ವಾ?