Select Your Language

Notifications

webdunia
webdunia
webdunia
webdunia

ಅತ್ತೆಯನ್ನ ಚಾಕು ಇರಿದು ಕೊಂದ ಅಳಿಯ..!

The son-in-law killed the mother-in-law with a knife
bangalore , ಶನಿವಾರ, 25 ಫೆಬ್ರವರಿ 2023 (18:32 IST)
ಕೆಲವೊಮ್ಮೆ ಫ್ಯಾಮಿಲಿ ಡಿಸ್ಪ್ಯೂಟ್ ಜಗಳ ಅದ್ಯಾವ ಹಂತಕ್ಕೂ ಟರ್ನ್ ಆಗ್ಬೋದು ಅನ್ನೋಕೆ ಈ ಪ್ರಕರಣನೇ ಸಾಕ್ಷಿ.. ಎಕ್ಸಾಂ ಇದೆ ಮೊಮ್ಮಗಳನ್ನ ಕಳೆಸು ಅಂತಾ ಬಂದಿದ್ದ ಅತ್ತೆ ಜೊತೆ ಜಗಳ ತೆಗೆದಿದ್ದ ಅಳಿಯ ಅತ್ತೆಯನ್ನೇ ಕೊಂದಿದ್ದಾನೆ.. ಅತ್ತೆಯ ಎದೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ.ಅಳಿಯನೊಬ್ಬ ಮಗಳ ಕೊಟ್ಟ ಅತ್ತೆಯನ್ನೇ ಚಾಕು ಇರಿದು ಕೊಲೆ ಮಾಡಿರೋ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗದೇವನಹಳ್ಳಿಯ ಬೃಂದಾವನ ಲೇಔಟ್ ನಲ್ಲಿ ನಿನ್ನೆ ನಡೆದಿದೆ..ಅತ್ತೆ 48ವರ್ಷದ ಏಳಲ್ ಅರಸು ಎಂಬಾಕೆಯನ್ನ ಅಳಿಯ ದಿವಾಕರ್ ಚಾಕು ಇರಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ.

 ಕೊಲೆಗೆ ಕಾರಣ ಏನು ಅಂದ್ರೆ ಇವ್ರ ಕೌಟುಂಬಿಕ ಜಗಳಗಳು. ಐದು ಮಕ್ಕಳಲ್ಲಿ ತನ್ನ ಮೊದಲನೇ ಮಗಳನ್ನ ದಿವಾಕರ್ ಗೆ ಕೊಟ್ಟು ಮೃತ ಏಳಲ್  ಅರಸು ಮದುವೆ ಮಾಡಿಕೊಟ್ಟಿದ್ರು. ಎಲ್ಲರೂ ಕೋಲಾರದ ಕೆ.ಜಿ.ಎಫ್ ನಿವಾಸಿಗಳು.. ಕಳೆದ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ದಿವಾಕರ್ ಗೆ ನಾಲ್ಕೈದು ವರ್ಷದ ಮಗಳು ಇದ್ಳು. ಒಳ್ಳೆ ಸಂಸಾರವೇ ನಡೆಸ್ತಿದ್ದ ದಿವಾಕರ್ ದಂಪತಿ ಮಧ್ಯೆ ಇತ್ತೀಚೆಗೆ ಜಗಳ ಆಗಿತ್ತು.. ಶಿವರಾತ್ರಿ ಹಬ್ಬಕ್ಕೆ ಅಂತಾ ದಿವಾಕರ್ ಪತ್ನಿ ತವರು ಮನೆಗೆ ಬಂದಿದ್ಳು.. ಹಬ್ಬಕ್ಕೆ ಅಂತಾ ತವರು ಮನೆಗೆ ಬಂದಾಕೆ ಎರಡು ದಿನ ಎಕ್ಸ್ಟ್ರಾ ತವರು ಮನೇಲೇ ಉಳಿದಿದ್ಳು. ಇಷ್ಟಕ್ಕೆ ಅತ್ತೆ ಮನೆಗೆ ಹೋಗಿ ಜಗಳ ತೆಗೆದಿದ್ದ ದಿವಾಕರ್ ಸಿಟ್ಟಿನಲ್ಲಿ ತನ್ನ ಮಗಳನ್ನ ಬೆಂಗಳೂರಿನಲ್ಲಿರೋ ತನ್ನ ಅಕ್ಕನ ಮನೆಗೆ ಕರೆ ತಂದಿದ್ದ.. ಮಗುಗೆ ಎಕ್ಸಾಂ  ಬೇರೆ ಇತ್ತು..ಹೀಗಾಗಿ ಮೊಮ್ಮಗಳ ಜೊತೆ ಬನ್ನಿ.. ಯಾಕೆ ಈ ಜಗಳಗಳು ಅಂತಾ ಅತ್ತೆ ಏಳಲ್ ಅರಸು ಅಳಿಯನನ್ನ ಮತ್ತು ಮಗಳನ್ನ ಒಂದು ಮಾಡೋಕೆ ಬಂದಿದ್ಳು.. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಜೋರಾಗಿದ್ದು ಸಿಟ್ಟಿನ ವೇಳೆ ಕಿಚನ್ ನಲ್ಲಿದ್ದ ಚಾಕು ತೆಗೆದುಕೊಂಡ ದಿವಾಕರ್ ಅತ್ತೆಯ ಎದೆಗೆ ಇರಿದು ಕೊಲೆ ಮಾಡಿದ್ದಾನೆ ಅಂತಾ ಇಳಲ್ ಅರಸಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.ಅತ್ತೆಗೆ ಚಾಕು ಇರಿದು ಕೊಲೆ ಮಾಡಿರೋ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ.. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿರೋ ಕೆಂಗೇರಿ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂನಲ್ಲಿ ಹಣ ವಿತ್ ಡ್ರಾ ಮಾಡಲು ಬರುವ ವಯಸ್ಸಾದ ವ್ಯಕ್ತಿಗಳೇ ಈತನ ಟಾರ್ಗೆಟ್..!