Select Your Language

Notifications

webdunia
webdunia
webdunia
webdunia

ಎಂ ಎಲ್ ಸಿ ಕಾರಿನ ನಂಬರ್ ಬಳಸಿ ಕದ್ದ ಕಾರು ಮಾರಾಟಕ್ಕೆ ಯತ್ನ

Attempt to sell stolen car using MLC car number
bangalore , ಶನಿವಾರ, 25 ಫೆಬ್ರವರಿ 2023 (18:00 IST)
ಸಿಲಿಕಾನ್ ಸಿಟಿಯಲ್ಲಿ ಸೆಕೆಂಡ್ ಹ್ಯಾಂಡ್ ಶೋ ರೂಮ್ ನಲ್ಲಿ ಕಾರು ಖರೀದಿ ಮಾಡೋ ಮುನ್ನ ಸ್ವಲ್ಪ ಏಮಾರಿದ್ರು ನಿಮ್ಮ ಕತೆ ಮೂಗಿತು. ಯಾವೂದೋ‌ ಕಾರುಗಳಿಗೆ ಇನ್ಯಾವ್ದೋ ನಂಬರ್ ಹಾಕಿ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡ್ತಾರೆ.
 
ಎಸ್ ಎಂ ಎಲ್ ಸಿ ಬೋಜೆಗೌಡರ ಕಾರು ಸೆಕೆಂಡ್ ಹ್ಯಾಂಡ್ ಶೋರ್ ನಲ್ಲಿ ನಿಂತಿರೋದನ್ನ ನೋಡಿ ಬೋಜೇಗೌಡರ ಪಿಎ ಕ್ವೀನ್ಸ್ ರಸ್ತೆಯಲ್ಲಿರೋ ಐ ಕಾರ್ಸ್ ಸ್ಟುಡಿಯೋ  ಒಳಗೆ ಹೋಗಿದ್ದಾರೆ.  ಅಂದಹಾಗೆ ಈ ಶೋ ರೂಮ್ ಇರೋದು ಕೂಡ ಕಾಂಗ್ರೆಸ್ ಭವನದ ಪಕ್ಕದಲ್ಲೆ. ಇನ್ನು ಓಳಗೋಗಿ ಕಾರಿನ ಬಗ್ಗೆ ವಿಚಾರಿಸಿದಾ ಹು ಸಾರ್ ಸೇಲ್ ಗಿದೆ ನಿಮಗೆ ಬೇಕಿತ್ತಾ ಟ್ರೈಯಲ್ ನೋಡ್ತಿರಾ ಅಂತ  ಶೋ ರೂಮ್ ನವರು ಕೇಳ್ತಿದ್ರೆ ಶಾಕ್ ಶಾಸಕರ ಪಿಎ ಹು ಸಾರ್ ಡಾಕ್ಯುಮೆಂಟ್ ಪಕ್ಕಾ ಇದ್ಯಾ ಅಂತ ಕೇಳಿ ಆರ್ ಸಿ ಕಾರ್ಡ್ ನೋಡಿದ್ದಾರೆ. ಅಚ್ಚರಿ ಏನಂದ್ರೆ ಆರ್ ಸಿ ಕೂಡ ಬೋಜೇಗೌಡರ ಹೆಸ್ರಲ್ಲೆ ಇತ್ತಂತೆ ತಕ್ಷಣ ಬೋಜೇಗೌಡರಿಗೆ ಕಾಲ್ ಮಾಡಿ ಸಾಹೇಬ್ರೆ ‌ನಿಮ್ಮ ಕಾರ್ ಸೇಲ್ ಮಾಡಿದ್ರ ಅಂತ ಕೇಳಿದ್ದಾರೆ. ಅದಕ್ಕೆ ಬೋಜೇಗೌಡರು ನಾನ್ ಯಾಕ್ ಸೇಲ್ ಮಾಡ್ಲಿ ಕಾರ್ ಇಲ್ಲೆ ಇದೆ ಅಂತ ಹೇಳಿದ್ದಾರೆ.
 
ಇತ್ತ ಶೋರೂಮ್ ನಲ್ಲಿ ನಿಮ್ಮ‌ನಂಬರಿನ ಕಾರ್ ಇದೇ ಸಾರ್ ಅಂತ ವಿಷಯ ಮುಟ್ಟಿಸಿ ಸೀದಾ ಹೋಗಿ ಹೈಗ್ರೌಂಡ್ ಠಾಣೆಗೆ  ದೂರು ನೀಡಿದ್ದಾರೆ. ‌ಇನ್ನು ದೂರಿನ್ವಯ ಹೈಗ್ರೌಂಡ್ ಪೊಲೀಸ್ರು ಐ ಕಾರ್ ಸ್ಟುಡಿಯೋ ಮಾಲಿಕ ಇಮ್ರಾನ್ ನ ಜೊತೆಗೆ ಕಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. 
 
ಇತ್ತ ಇಮ್ರಾನ್ ಸರ್ ನನಗೆ ಬೇರೆಯವರು ಕಾರು ಕೊಟ್ಟಿದ್ದಾರೆ ಅಂತ ಹೇಳ್ತಿದ್ದು ಅವರ ಪತ್ತೆಗೆ ಪೊಲೀಸ್ರು ಮುಂದಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BWSSB, BBMP ನಿರ್ಲಕ್ಷ್ಯದಿಂದ ಜನರಿಗೆ ಕಂಟಕ