Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಬಿಜೆಪಿ ನಡುವೆ ರೀಡೂ ಫೈಟ್- ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಮುಂದಾದ ಸರ್ಕಾರ

ಕಾಂಗ್ರೆಸ್ ಬಿಜೆಪಿ ನಡುವೆ ರೀಡೂ ಫೈಟ್- ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಮುಂದಾದ ಸರ್ಕಾರ
bangalore , ಶನಿವಾರ, 25 ಫೆಬ್ರವರಿ 2023 (14:52 IST)
ಕಾಂಗ್ರೆಸ್ ಬಿಜೆಪಿ ನಡುವೆ ರೀಡೂ ಫೈಟ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ‌ ಪ್ರತಿಕ್ರಿಯಿಸಿದ್ದುನಾನು ಹೇಳಿದ್ದನ್ನು ಹೇಗೆ ಅವ್ರು ಸುಳ್ಳು ಅಂತಾರೆ..?ಕಮಿಷನ್ ರಿಪೋರ್ಟ್ ನ್ನು ನಾನು ಓದಿ ಹೇಳಿದ್ದೇನೆ.ಅವರು ನೇಮಿಸಿದ್ದ ಕೆಂಪಣ್ಣ ಆಯೋಗ ರಿಪೋರ್ಟ್ ನ್ನೇ ನಾನು ಓದಿ ಹೇಳಿದ್ದೇನೆ.ಅದೇನು ಬಸವರಾಜ್ ಬೊಮ್ಮಾಯಿದ್ದಲ್ಲ.ನಾನು ಇದರಲ್ಲಿ ಸುಳ್ಳು ಹೇಳುವ ಪ್ರಶ್ನೆಯೇ ಬರೋದಿಲ್ಲ.ಏನಾದರೂ ಸುಳ್ಳು ಹೇಳ್ತಿದ್ರೆ ಅವರೇ ಹೇಳ್ರಿದ್ದಾರೆ.ಅವರೇ ಹೇಳಿದ್ಸಾರಲ್ಲ, ಅಧಿಕಾರಿ ಗಳನ್ನು ತಂದಿದ್ದನ್ನು ನಾನೇ ಅನುಮೋದಿಸಿದ್ಸೇನೆ ಅಂತಾ, ಇದಕ್ಕಿಂತ ಉದಾಹರಣೆ ಮತ್ತೇನು ಬೇಕು..?ಅವರು ಮಾಡಿರೋದು ತಪ್ಪು ಅಂತಾ ಇದರಿಂದಲೇ ಗೊತ್ತಾಗುತ್ತಲ್ವಾ..?ಅಡ್ವಕೇಟ್ ಜನರಲ್ ವಾದ ಆದಮೇಲೆ ಜಡ್ಜ್ ಏನು ಹೇಳಿದ್ದಾರೆ.ಅದು ಅಲ್ವಾ ಇಂಪಾರ್ಟೆಂಟೂ.ವಾದಗಳನ್ನು ನಮಗೆ ಬೇಕಾದಂತೆ ನಾವು ಮಾಡ್ಕೋತ್ತೀವಿ.ಆದರೆ ಅಂತಿಮವಾಗಿ ಜಡ್ಜ್ ಕೊಟ್ಟ ತೀರ್ಪು ತಾನೇ ಇಂಪಾರ್ಟೆಂಟೂ.ಜಡ್ಜಮೆಂಟ್ ಹೇಳಿದ್ದೇನೆ, ಕಮಿಷನ್ ರಿಪೋರ್ಟ್ ಓದಿದ್ದೇನೆ.ಇದು ಕಟು ಸತ್ಯ, ಸಿದ್ದರಾಮಣ್ಣನವರು ಕಟು ಸತ್ಯವನ್ನು ಎದುರಿಸುವಂತ ಕಾಲ ಬಂದಿದೆ.ಹೀಗಾಗಿ ಮುಂದೆ ನಾವು ಏನು ಕ್ರಮ ತಗೋಬೇಕೋ ಅದನ್ನು ತೆಗೆದುಕೊಳ್ತೀವಿ.ತನಿಖೆಗೂ ಕ್ರಮ ತೆಗೆದುಕೊಳ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳಿದ್ರು.ಅಲ್ಲದೇ ಇದೀಗ ಕೊನೆಗೂ ರೀಡೂ ಕುರಿತು ಸಿದ್ದರಾಮಯ್ಯ ವಿರುದ್ಧ  ಸರ್ಕಾರ ತನಿಖೆಗೆ ಮುಂದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕನ್ನಡ ಉಳಿಸಿ ಬೆಳೆಸುವುದಕ್ಕಾಗಿ ವಾಟಾಳ್ ನಾಗರಾಜ್ ಧರಣಿ