ಲೋನ್ ಕಟ್ಟದೆ ಇದ್ರೆ ಇಡೀ ಫ್ಯಾಮೀಲಿ ಬಯಲಿಗೆಳಿತಿನಿ.ಇಡಿ ಕುಟುಂಬವನ್ನ ಕಾಂಟಾಕ್ಟ್ ಮಾಡ್ತಿವಿ .ಅರ್ಧ ಗಂಟೆ ಒಂದು ಗಂಟೆಯಲ್ಲಿ ಹಣ ನೀಡದಿದ್ದಲ್ಲಿ ಕುಟುಂಬಸ್ಥರ ವಾಟ್ಸಪ್ ಗ್ರೂಪ್ ಮಾಡಿ ಮರ್ಯಾದೆ ತೆಗಿತೀವಿ ಎಂದು ಚೀನಿ ಆ್ಯಪ್ ಗಳು ಧಮ್ಕಿ ಹಾಕ್ತಿದೆ. ಬೇರೆಯವರು ಸಾಲ ಪಡೆದವರಿಗೆ ಅವರ ಕಾಂಟಾಕ್ಟ್ ಲಿಸ್ಟ್ ನಲ್ಲಿದ್ದವರಿಗೂ ಟಾರ್ಚರ್ ನೀಡುತ್ತಿದ್ದಾರೆ. ಪೊಲೀಸ್ ಗೆ ದೂರು ನೀಡ್ತಿನಿ ಎಂದರೂ ಚೀನಿ ಆ್ಯಪ್ ಟೀಂ ನವರು ಕ್ಯಾರೆ ಅನ್ನುತ್ತಿಲ್ಲ.'Haha like I care about police s...' ಹೀಗೆಂದು ಪೊಲೀಸರ ಬಗ್ಗೆಯೇ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.ಫಸ್ಟ್ ಲೋನ್ ಎಂಬ ಚೀನಿ ಕಂಪನಿಯಿಂದ ಧಮ್ಕಿ ಹಾಕುತ್ತಿದ್ದು,ಸದ್ಯ ಚೀನಿ ಲೋನ್ ಆ್ಯಪ್ ಗಳ ಕಿರುಕುಳದ ಬಗ್ಗೆ ಪ್ರತಿನಿತ್ಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗ್ತಿದೆ.