Publish Date: Wed, 26 Oct 2022 (17:15 IST)
Updated Date: Wed, 26 Oct 2022 (17:22 IST)
ರಸ್ತೆ ಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ರಸ್ತೆ ಗುಂಡಿಯಲ್ಲಿ ಪಟಾಕಿ ಹೊಡೆಯುವ ಮೂಲಕ ಪ್ರತಿಭಟನೆ ಮಾಡಲಾಗಿದೆ.ಬೆಂಗಳೂರು ನಗರದ ರಸ್ತೆಗಳಲ್ಲಿ ಪ್ರಯಾಣ ಮಾಡುವುದೇ ಕಷ್ಟವಾಗಿದೆ.ರಸ್ತೆ ಗುಂಡಿಗಳಿಂದಾಗಿ ಹಲವರು ಜೀವ ಕಳೆದುಕೊಂಡಿದ್ದಾರೆ ಮತ್ತು ಬಹಳಷ್ಟು ಜನ ಗಾಯಾಳುಗಳಾಗಿದ್ದಾರೆ.ಇಷ್ಟೆಲ್ಲಾ ಆದ್ರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಗಾಢ ನಿದ್ರೆಯಲ್ಲಿದ್ದಾರೆ.ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.ಅಲ್ಲದೇ ಕೈ ಕಾರ್ಯಕರ್ತರು ಶ್ರೀನಗರದ ಪೈಪ್ ಲೈನ್ ರಸ್ತೆಯಲ್ಲಿರುವ ರಸ್ತೆ ಗುಂಡಿಗಳಲ್ಲಿ ಪಟಾಕಿ ಹೊಡೆಯುವ ಮೂಲಕ ಕೈ ಪ್ರತಿಭಟನೆ ನಡೆಸುವ ಮೂಲಕ ಅಸಾಮಾಧಾನ ಹೊರಹಾಕಿದ್ದಾರೆ.